ಕಾಸರಗೋಡು: ನಗರದ ಕರಂದಕ್ಕಾಡಿನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ದಾಖಲೆಪತ್ರಗಳಿಲ್ಲದೆ ಸಾಗಿಸುತ್ತಿದ್ದ 10.60ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಡಿವೈಎಸ್‍ಪಿ ಪಿ.ಕೆ ಸುಧಾಕರನ್ ನಿರ್ದೇಶ ಪ್ರಕಾರ ನಗರಠಾಣೆ ಎಸ್.ಐ ವಿಷ್ಣು ಪ್ರಸಾದ್ ನೇತ್ರತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಬಂಬ್ರಾಣ ಕಿದೂರು ನಿವಾಸಿ ಕೆ.ಎಚ್ ಅಬೂಬಕ್ಕರ್ ಸಿದ್ದೀಕ್ ಎಂಬಾತನನ್ನು ಬಂಧಿಸಿದ್ದಾರೆ. ನೂರು ಹಾಗೂ ಐನ್ನೂರರ ನೋಟುಗಳನ್ನೊಳಗೊಂಡ ಕಂತೆಗಳನ್ನು ಗೋಣಿಚೀಲದಲ್ಲಿ ತುಂಬಿ, ಕಾರಿನಲ್ಲಿ ಸಾಗಿಸಲಾಗುತ್ತಿತ್ತು. ಕರಂದಕ್ಕಾಡಿನಲ್ಲಿ ಗಸ್ತು ನಡೆಸುತ್ತಿದ್ದ ಪೊಲೀಸರ ಕಣ್ತಪ್ಪಿಸಿ ಬ್ಯಾಂಕ್ ರಸ್ತೆಯತ್ತ ಸಾಗಿದ ಕಾರನ್ನು ಪೊಲೀಸರು ತಮ್ಮ ವಾಹನದಲ್ಲಿ ಹಿಂಬಾಲಿಸಿ ಸೆರೆಹಿಡಿದಿದ್ದರು. ಹಣ ವಶಪಡಿಸಿರುವ ಬಗ್ಗೆ ಎನ್‍ಫೋರ್ಸ್‍ಮೆಂಟ್ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ.


