ದೆಹಲಿ: 2014ಕ್ಕಿಂತ ಮೊದಲು ಭ್ರಷ್ಟಾಚಾರ ಮತ್ತು ಹಗರಣಗಳ ಯುಗವಿತ್ತು, ಬಡವರ ಹಕ್ಕುಗಳು ಮತ್ತು ಅವರ ಹಣವನ್ನು ದರೋಡೆ ಮಾಡಲಾಗುತ್ತಿತ್ತು. ಆದರೆ, ಈಗ ಪ್ರತಿ ಪೈಸೆಯೂ ನೇರವಾಗಿ ಬಡವರ ಖಾತೆಗಳಿಗೆ ತಲುಪುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
0
samarasasudhi
ಆಗಸ್ಟ್ 22, 2023
ದೆಹಲಿ: 2014ಕ್ಕಿಂತ ಮೊದಲು ಭ್ರಷ್ಟಾಚಾರ ಮತ್ತು ಹಗರಣಗಳ ಯುಗವಿತ್ತು, ಬಡವರ ಹಕ್ಕುಗಳು ಮತ್ತು ಅವರ ಹಣವನ್ನು ದರೋಡೆ ಮಾಡಲಾಗುತ್ತಿತ್ತು. ಆದರೆ, ಈಗ ಪ್ರತಿ ಪೈಸೆಯೂ ನೇರವಾಗಿ ಬಡವರ ಖಾತೆಗಳಿಗೆ ತಲುಪುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭೋಪಾಲ್‌ನ ಶಾಲೆಯೊಂದಕ್ಕೆ ಹೊಸದಾಗಿ ನೇಮಕಗೊಂಡ ಶಿಕ್ಷಕರ ತರಬೇತಿ ಮತ್ತು ಪುನಶ್ಚೇತನ ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಮಾತನಾಡಿದರು.
ಹೆಚ್ಚಿನ ಸಂಖ್ಯೆಯ ಜನರು ತೆರಿಗೆಯನ್ನು ಪಾವತಿಸುತ್ತಿರುವುದು ಅಂಕಿಅಂಶಗಳಿಂದ ತಿಳಿದು ಬಂದಿದೆ. ಇದು ಅವರ ಹಣವನ್ನು ಸರ್ಕಾರ ಸದುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಸರ್ಕಾರದ ಮೇಲಿನ ನಂಬಿಕೆಯನ್ನು ತೋರಿಸುತ್ತದೆ ಎಂದು ಮೋದಿ ತಿಳಿಸಿದರು.
ಐದು ವರ್ಷಗಳಲ್ಲಿ ಸುಮಾರು 13.50 ಕೋಟಿ ಭಾರತೀಯರು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ವರ್ಗದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ. ಆದಾಯ ತೆರಿಗೆ ರಿಟರ್ನ್ಸ್‌ಗಳ ಸಂಖ್ಯೆಯು 2014ರಲ್ಲಿ ₹4 ಲಕ್ಷಗಳಷ್ಟಿದ್ದು, ಭಾರತೀಯರ ಸರಾಸರಿ ಆದಾಯವು ಕಳೆದ ಒಂಬತ್ತು ವರ್ಷಗಳಲ್ಲಿ ₹13 ಲಕ್ಷಕ್ಕೆ ಏರಿಕೆಯಾಗಿರುವುದನ್ನು ತೋರಿಸುತ್ತಿದೆ ಎಂದು ಅವರು ಹೇಳಿದರು.
'ಎಲ್ಲಾ ಕ್ಷೇತ್ರಗಳು ಬಲಗೊಳ್ಳುತ್ತಿದ್ದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ದತ್ತಾಂಶಗಳು ತೋರಿಸುತ್ತಿವೆ. ಸರ್ಕಾರದ ಮೇಲೆ ನಾಗರಿಕರ ನಂಬಿಕೆ ಹೆಚ್ಚುತ್ತಿದ್ದು, ತಮ್ಮ ಪ್ರತಿ ಪೈಸೆಯೂ ದೇಶದ ಅಭಿವೃದ್ಧಿಗೆ ವಿನಿಯೋಗವಾಗಲಿದೆ ಎಂಬ ನಂಬಿಕೆಯಿಂದ ಜನರು ತೆರಿಗೆಯನ್ನು ಜಮೆ ಮಾಡಲು ಮುಂದಾಗಿದ್ದಾರೆ. 2014ರಲ್ಲಿ 10ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕತೆ ಈಗ ವಿಶ್ವದಲ್ಲಿ 5ನೇ ಸ್ಥಾನಕ್ಕೆ ತಲುಪಿದೆ' ಎಂದು ಮೋದಿ ವಿವರಿಸಿದರು.
'2014ರ ಮೊದಲು ಭ್ರಷ್ಟಾಚಾರ ಮತ್ತು ಹಗರಣಗಳ ಯುಗವಾಗಿದ್ದು, ಬಡವರ ಹಣವು ಅವರ ಖಾತೆಗಳನ್ನು ತಲುಪುವ ಮೊದಲೇ ಲೂಟಿಯಾಗುತ್ತಿತ್ತು. ಆದರೆ, ಈಗ ಪ್ರತಿ ಪೈಸೆಯೂ ಅವರ ಖಾತೆಗಳಿಗೆ ನೇರವಾಗಿ ತಲುಪುತ್ತಿದೆ' ಎಂದು ಪ್ರಧಾನಿ ತಿಳಿಸಿದರು.