HEALTH TIPS

3 ಕೋಟಿ ರೂ. ಬ್ಯಾಗ್ ಹಿಡಿದು ಫುಟ್​ಬಾಲ್​ ಪಂದ್ಯ ನೋಡಲು ಬಂದ ಖ್ಯಾತ ನಟಿ

               ಮುಂಬೈ: ಅಮೆರಿಕದ ಖ್ಯಾತ ನಟಿ, ಮಾಡೆಲ್​, ಉದ್ಯಮಿ ಕಿಮ್​ ಕರ್ದಾಶಿಯನ್​ ಬರೋಬ್ಬರಿ 3 ಕೋಟಿ ರೂಪಾಯಿಗೂ ಅಧಿಕ ಬೆಲೆಯ ಬ್ಯಾಗ್ ಹಿಡಿದು ಫುಟ್​ಬಾಲ್​ ಪಂದ್ಯ ನೋಡಲು ಬಂದಿರುವುದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ಚರ್ಚೆಯಾಗುತ್ತಿದೆ.

                ಕಿಮ್​ ಕರ್ದಾಶಿಯನ್​ ಫುಟ್​ಬಾಲ್​ ಪಂದ್ಯ ನೋಡಲು ಬಂದಿದ್ದ ವೇಳೆ​ ಒಂದು ಬ್ಯಾಗ್​ ಹಿಡಿದುಕೊಂಡಿದ್ದರು.

               ಸಿಲ್ವರ್ ಬಣ್ಣದ ಬ್ಯಾಗ್​ ಇದಾಗಿದೆ. ಇದರ ಬೆಲೆ ಬರೋಬ್ಬರಿ 3 ಕೋಟಿ 12 ಲಕ್ಷದ 61 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ.

              ಬ್ಯಾಗ್​ನ ವಿಶೇಷತೆ?: ಇದು ಪ್ರತಿಷ್ಠಿತ ಹರ್ಮೆಸ್​ ಕಂಪನಿಯ ಬ್ಯಾಗ್​. ಬಂಗಾರ ಮತ್ತು ವಜ್ರದಿಂದ ಮಾಡಿದ ವಿನ್ಯಾಸ ಇದೆ. ಜಗತ್ತಿನ ಕೆಲವೇ ಕೆಲವು ಮಂದಿ ಮಾತ್ರ ಈ ಬ್ಯಾಗ್‌ನ ಮಾಲಿಕರಾಗಿದ್ದಾರೆ. ಈಗಾಗಲೇ ಎಲ್ಲಾ ಬ್ಯಾಗ್​ಗಳು ಸೋಲ್ಡ್​ ಔಟ್​ ಆಗಿವೆ. ಬೇಕು ಎಂದರೂ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ಅಷ್ಟೋಂದು ದುಬಾರಿ ಹಾಗೂ ವಿಶೇಷವಾಗಿದೆ.

                ಬ್ಯಾಗ್​​ ಬೆಲೆ ಕೇಳಿ ನೆಟ್ಟಿಗರು ಆ ಚಿಕ್ಕ ಬ್ಯಾಗ್‌ಗೆ ಅಷ್ಟು ಕೊಟ್ಟಿದ್ದಾರಾ? ಅಷ್ಟಕ್ಕೂ ಇದು ಎಂಥ ಬ್ಯಾಗ್​? ಇದರಲ್ಲಿ ಅಂಥ ವಿಶೇಷತೆ ಏನು ಎಂದು ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries