ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಅವರು ಗುರುವಾಯೂರಪ್ಪನವರಿಗೆ ಚಿನ್ನದ ಕಿರೀಟ ಹರಕೆಯಾಗಿ ಒಪ್ಪಿಸಿರುವರು.
14 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ 32 ಪವನ್ ಕಿರೀಟವನ್ನು ಅರ್ಪಿಸಲಾಯಿತು. ನಿನ್ನೆ ಮಧ್ಯಾಹ್ನ ಗುರುವಾಯೂರು ತಲುಪಿದ ನಂತರ ಚಿನ್ನದ ಕಿರೀಟವನ್ನು ಅರ್ಪಿಸಲಾಯಿತು. ಅವರ ಜೊತೆಯಲ್ಲಿ ಅವರ ಸಹೋದರಿ ಜಯಂತಿ ಕೂಡ ಇದ್ದರು.
ಕೊಯಮತ್ತೂರಿನವರಾದ ಶಿವಜ್ಞಾನ ಎಂಬುವವರು ಕಿರೀಟ ಸಿದ್ದಪಡಿಸಿದ್ದರು. ಗುರುವಾಯೂರಪ್ಪನಿಗೆ ಪ್ರಿಯವೆಂದು ನಂಬಲಾದ ಕದಳಿಗೊನೆ ಮತ್ತು ಬೆಣ್ಣೆಯನ್ನು ಅರ್ಪಿಸಿದ ನಂತರ ದುರ್ಗೆ ಹಿಂತಿರುಗಿದರು.
ಕಿರೀಟದ ಜೊತೆಗೆ ಶ್ರೀಗಂಧದ ಎಣ್ಣೆಯನ್ನು ರುಬ್ಬುವ ಯಂತ್ರವನ್ನು ಇರಿಸಲಾಗಿತ್ತು. ತ್ರಿಶೂರ್ ಪೋತೊಲ್‍ನ ಆರ್‍ಎಂ ಸತ್ಯಂ ಇಂಜಿನಿಯರಿಂಗ್‍ನ ಮಾಲೀಕ ಕೆ.ಎಂ.ರವೀಂದ್ರನ್ ಈ ಯಂತ್ರವನ್ನು ವಿನ್ಯಾಸಗೊಳಿಸಿದ್ದಾರೆ.





