HEALTH TIPS

ಇಂಗ್ಲೆಂಡ್‌ನಲ್ಲಿ ಕ್ಯಾನ್ಸರ್ ರೋಗಿಗಳಿಗೆ 7 ನಿಮಿಷದ ಇಂಜೆಕ್ಷನ್ ಟ್ರೀಟ್ಮೆಂಟ್‌

 ಕ್ಯಾನ್ಸರ್ ಎಂಬ ಮಹಾಮಾರಿಗೆ ಸಿಲುಕಿ ಬಹುತೇಕ ಜನರು ನರಳುತ್ತಿದ್ದಾರೆ. ಕ್ಯಾನ್ಸರ್‌ ನೀಡುವ ನೋವಿನಷ್ಟೇ ಅದರ ಚಿಕಿತ್ಸೆಯಲ್ಲೂ ನೋವನ್ನು ಅನುಭವಿಸಬೇಕಾಗುವುದು. ಒಂದೊಂದು ಕೀಮೋಥೆರಪಿ ಮಾಡಿಸಿ ಬಂದಾಗ ರೋಗಿ ಅನುಭವಿಸುವ ನೋವನ್ನು ನೋಡಿದಾಗ ಎಂಥವರಿಗೂ ಸಂಕಟವಾಗುವುದು.

ಕ್ಯಾನ್ಸರ್ ಚಿಕಿತ್ಸೆ ವಿಷಯದಲ್ಲಿ ಅತ್ಯಾಧುನಿಕ ಪ್ರಯೋಗಗಳು ನಡೆಯುತ್ತಲೇ ಇದೆ. ಇದೀಗ ಬ್ರಿಟನ್‌ನ ಆರೋಗ್ಯ ಸೇವಾ ಸಂಸ್ಥೆ ಕ್ಯಾನ್ಸರ್ ರೋಗಿಗೆ ನೀಡುವ ಇಂಜೆಕ್ಷನ್‌ನ ಸಮಯ ಕಡಿಮೆ ಮಾಡುವ ಮತ್ತೊಂದು ಹೊಸ ಆವಿಷ್ಕಾರ ಕಂಡು ಹಿಡಿದಿದೆ. ಇದರಿಂದ ಚಿಕತ್ಸೆಗೆ ಬೇಕಾದ ಸಮಯ ಉಳಿತಾಯವಾಗುವುದು, ಇದರಿಂದಾಗಿ ವೈದ್ಯರು ಇನ್ನೂ ಅಧಿಕ ರೋಗಿಗಳ ಕಡೆ ಗಮನ ನೀಡಲು ಸಾಧ್ಯವಾಗುವುದು.

ಇಂಗ್ಲೆಂಡ್‌ನ MHRA (Medicines and Healthcare products Regulatory Agency)7 ನಿಮಿಷ ಚಿಕಿತ್ಸೆಗೆ ಅನುಮತಿ ನೀಡಿದ್ದು ಆಗಸ್ಟ್‌ 29ಕ್ಕೆ 100 ಕ್ಯಾನ್ಸರ್ ರೋಗಿಗಳಿಗೆ ಈ ಚುಚ್ಚುಮದ್ದು ನೀಡಲಾಯಿತು. ಈ ಚಿಕಿತ್ಸೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡುವ ಸಮಯ ಉಳಿತಾಯವಾಗುವುದರಿಂದ ವೈದ್ಯರು ಹಾಜಗೂ ನರ್ಸ್‌ಗಳಿಗೆ ಇನ್ನೂ ಅಧಿಕ ರೋಗಿಗಳ ಕಡೆ ಗಮನ ನೀಡಲು ಸಾಧ್ಯವಾಗುವುದು.

ಈ ಚಿಕಿತ್ಸೆಯನ್ನು ಶ್ವಾಶಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಲಿವರ್ ಕ್ಯಾನ್ಸರ್, ಬ್ಲೇಡರ್ ಕ್ಯಾನ್ಸರ್ ಇರುವವರಿಗೆ ನೀಡಲಾಗುವುದು ಎಂದು ಇಂಗ್ಲೆಂಡ್‌ನ ನ್ಯಾಷನಲ್ ಹೆಲ್ತ್‌ ಸರ್ವೀಸ್‌ ಹೇಳಿದೆ.

ಕ್ಯಾನ್ಸರ್‌ ರೋಗಿಗಳು ಗುಣ ಮುಖರಾಗಲು ಚಿಕಿತ್ಸೆ ಜೊತೆ ಈ ಅಂಶಗಳ ಕಡೆ ಗಮನ ನೀಡುವುದು ಮುಖ್ಯ
ಕ್ಯಾನ್ಸರ್ ರೋಗ ಬಂದರೆ ವ್ಯಕ್ತಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗುತ್ತಾನೆ. ಈ ಅ ಸಮಯದಲ್ಲಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ತುಂಬಾನೇ ಮುಖ್ಯ.
* ಅವರನ್ನು ಪ್ರೀತಿಯಿಂದ ಆರೈಕೆ ಮಾಡಬೇಕು: ಈ ಅವಧಿಯಲ್ಲಿ ರೋಗಿಗಳು ದೇಹದ ನೋವಿನ ಜೊತೆಗೆ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿರುತ್ತಾರೆ, ಈ ಅವಧಿಯಲ್ಲಿ ಅವರಿಗೆ ಪ್ರೀತಿ ತೋರಬೇಕು, ಅವರಲ್ಲಿ ಧೈರ್ಯ ತುಂಬಬೇಕು.
* ನೀವು ನಂಬುವ ಕಡೆ ಚಿಕಿತ್ಸೆ ಪಡೆಯಿರಿ
ನಾವು ಚಿಕಿತ್ಸೆ ಪಡೆಯುವಾಗ ನಾವು ಚಿಕಿತ್ಸೆ ಪಡೆಯುವ ವೈದ್ಯರ ಮೇಲೆ ನಂಬಿಕೆ ಇರಬೇಕು, ಆವಾಗ ಆ ಔಷಧಿ ಕೂಡ ನಮ್ಮ ಮೇಲೆ ಒಳ್ಳೆಯ ಪ್ರಭಾವ ಬೀರುವುದು, ಆದ್ದರಿಂದ ನಿಮಗೆ ನಂಬಿಕೆ ಇರುವ ಕಡೆ ಚಿಕಿತ್ಸೆ ಪಡೆಯಿರಿ.
* ನಿನ್ನ ಜೊತೆ ನಾನು ಇದ್ದೇನೆ ಎಂದು ಧೈರ್ಯ ತುಂಬಿ: ನಿನಗೆ ಏನು ಅನಿಸುತ್ತದೆ ಎಂದು ನನಗೆ ಗೊತ್ತು ಎಂದು ಹೇಳುವ ಬದಲಿಗೆ ಏನೇ ಆಗಲಿ ನಿನ್ನ ಜೊತೆ ನಾನು ಇರುತ್ತೇನೆ ಎಂದು ಧೈರ್ಯ ತುಂಬಿ.
* ಚಿಕಿತ್ಸೆ, ಔಷಧಗಳನ್ನು ಸರಿಯಾದ ಸಮಯಕ್ಕೆ ಮಾಡಿಸಿ: ವೈದ್ಯರು ಸೂಚಿಸಿದ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಿ. ಚಿಕಿತ್ಸೆಯನ್ನು ಸರಿಯಾಗಿ ಸಮಯಕ್ಕೆ ಮಾಡಿಸಿ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries