ಜೈಪುರ: ಈ ವರ್ಷದ ಅಂತ್ಯಕ್ಕೆ ರಾಜಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಎರಡು ಮಹತ್ವದ ಚುನಾವಣಾ ಸಮಿತಿಗಳನ್ನು ರಚಿಸಿ ಗರುವಾರ ಪ್ರಕಟಿಸಿದೆ.
0
samarasasudhi
ಆಗಸ್ಟ್ 17, 2023
ಜೈಪುರ: ಈ ವರ್ಷದ ಅಂತ್ಯಕ್ಕೆ ರಾಜಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಎರಡು ಮಹತ್ವದ ಚುನಾವಣಾ ಸಮಿತಿಗಳನ್ನು ರಚಿಸಿ ಗರುವಾರ ಪ್ರಕಟಿಸಿದೆ.
ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕಿ ವಸುಂಧರಾ ರಾಜೆ ಅವರನ್ನು ಈ ಎರಡು ಸಮಿತಿಗಳಿಂದ ಕೈಬಿಡಲಾಗಿದೆ.
21 ಸದಸ್ಯರ ಚುನಾವಣಾ ನಿರ್ವಹಣಾ ಸಮಿತಿಗೆ ಮಾಜಿ ಸಂಸದ ನಾರಾಯಣ್ ಪಂಚಾರಿಯಾ ಅಧ್ಯಕ್ಷರಾಗಿದ್ದಾರೆ. ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಪ್ರಣಾಳಿಕೆ ಸಮಿತಿಯ ನೇತೃತ್ವ ವಹಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಸಿ.ಪಿ.ಜೋಶಿ ತಿಳಿಸಿದ್ದಾರೆ.