ತಿರುವನಂತಪುರ: ಸ್ವಾತಂತ್ರ್ಯ ದಿನದ ಅಂಗವಾಗಿ ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂನಲ್ಲಿ ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧ್ವಜಾರೋಹಣ ಮಾಡಲಿದ್ದಾರೆ.
ವಿವಿಧ ಪಡೆಗಳು, ಸೈನಿಕ ಶಾಲೆ, ಸ್ಟೂಡೆಂಟ್ಸ್ ಪೋಲೀಸ್ ಕೆಡೆಟ್‍ಗಳು, ಅಶ್ವರೂಡ ಪೋಲೀಸ್, ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಇತ್ಯಾದಿಗಳಿಂದ ಪರೇಡ್ ನಡೆಯುತ್ತದೆ.
ವಿವಿಧ ಸಶಸ್ತ್ರ ಪಡೆಗಳಿಗೆ ಜೀವಮಾನ ಪದಕಗಳು ಮತ್ತು ರಾಷ್ಟ್ರಪತಿಗಳ ಪದಕಗಳನ್ನು ವಿತರಿಸಲಾಗುವುದು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನೂ ಹಾಡಲಿದ್ದಾರೆ. ರಾಜ್ಯ ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಸ್ಥಳೀಯಾಡಳಿತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕಾಲೇಜುಗಳು, ಶಾಲೆಗಳು ಮತ್ತು ಇತರ ಢಳಿತ ಸಂಸ್ಥೆಗಳ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಬೇಕು ಎಂದು ಸಾರ್ವಜನಿಕ ಆಡಳಿತ ಇಲಾಖೆ ತಿಳಿಸಿದೆ.
ರಾಷ್ಟ್ರಧ್ವಜವನ್ನು ಹಾರಿಸುವಾಗ ಧ್ವಜ ಕಾಯಿದೆ 2002ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾಷ್ಟ್ರಗೀತೆ ಮೊಳಗಿದಾಗ ಎಲ್ಲರೂ ಎದ್ದು ನಿಲ್ಲಬೇಕು. ಪ್ಲಾಸ್ಟಿಕ್‍ನಿಂದ ತಯಾರಿಸಿದ ರಾಷ್ಟ್ರಧ್ವಜಗಳ ತಯಾರಿಕೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆಚರಣೆಯ ಸಂದರ್ಭದಲ್ಲಿ ಗ್ರೀನ್ ಪೆÇ್ರೀಟೋಕಾಲ್ ಅನ್ನು ಅನುಸರಿಸಬೇಕು. ರಾಜ್ಯದಲ್ಲಿ ರಾಷ್ಟ್ರಧ್ವಜ ಬಳಸುವಾಗ ಧ್ವಜ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಾರ್ವಜನಿಕ ಆಡಳಿತ ಇಲಾಖೆ ಸೂಚಿಸಿದೆ. ರಾಷ್ಟ್ರಧ್ವಜವನ್ನು ಹತ್ತಿ, ಪಾಲಿಯೆಸ್ಟರ್, ನೂಲು, ರೇμÉ್ಮ ಮತ್ತು ಖಾದಿ ಬಳಸಿ ಕೈಯಿಂದ ಅಥವಾ ಯಂತ್ರದಿಂದ ತಯಾರಿಸಬೇಕು.





