ಕೊಚ್ಚಿ: ಖ್ಯಾತ ಹಾಸ್ಯನಟ ಸಲೀಂ ಕುಮಾರ್ ವಿರುದ್ಧ ಸಚಿವ ವಿ ಶಿವನ್ ಕುಟ್ಟಿ ಟೀಕೆ ವ್ಯಕ್ತಪಡಿಸಿದ್ದಾರೆ. ಫೇಸ್‍ಬುಕ್ ಪೋಸ್ಟ್‍ನಲ್ಲಿ ಶಿವನ್ ಕುಟ್ಟಿ ಅವರು, ದೇವಸ್ವಂ ಸಚಿವರನ್ನು ಪೌರಾಣಿಕ(ಮಿಥ್) ಮಂತ್ರಿ ಎಂದು ಕರೆದ ಸಲೀಂ ಕುಮಾರ್ ಹೇಳಿಕೆ ತಪ್ಪು ಎಂದು ಹೇಳಿದ್ದಾರೆ. ಸಲೀಂ ಕುಮಾರ್ ಅವರು ಘಟನೆಯ ಪರಾಮರ್ಶೆ ನಡೆಸಿ ದೇವಸ್ವಂ ಸಚಿವರು ಇನ್ನು ಮಿಥ್ ಮಂತ್ರಿ ಯಾಕಾಗಬಾರದು ಎಂದು ಬರೆದುಕೊಂಡಿದ್ದರು.
ಗೌರವಾನ್ವಿತ ದೇವಸ್ವಂ ಸಚಿವ ಶ್ರೀ ಕೆ.ರಾಧಾಕೃಷ್ಣನ್ ಅವರನ್ನು ಪೌರಾಣಿಕ ಇಲಾಖೆ ಸಚಿವರು ಎಂದು ಉಲ್ಲೇಖಿಸಿದ ಚಿತ್ರನಟ ಶ್ರೀ ಸಲೀಂ ಕುಮಾರ್ ಅವರ ಕ್ರಮ ಸರಿಯಲ್ಲ. ಸಲೀಂಕುಮಾರ್ ಅವರಂತಹ ವ್ಯಕ್ತಿ ಇಂತಹ ಹೇಯ ಹೇಳಿಕೆ ನೀಡಬಾರದಿತ್ತು. ಕೆ ರಾಧಾಕೃಷ್ಣನ್ ಅವರು ಭಾರೀ ಬಹುಮತದಿಂದ ಜನರು ಗೆಲ್ಲಿಸಿದ ಜನ ನಾಯಕ. ಸಲೀಂ ಕುಮಾರ್ ಅವರನ್ನು ವಿನಾಕಾರಣ ವಿವಾದಕ್ಕೆ ಎಳೆದಿರುವÀರು. ಸಲೀಂ ಕುಮಾರ್ ಈ ಹೇಳಿಕೆಯನ್ನು ಹಿಂಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಶಿವನ್ ಕುಟ್ಟಿ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.





