ನವದೆಹಲಿ: ವಿವಿಧ ಸವಾಲುಗಳನ್ನು ಎದುರಿಸಿ ಮಹಿಳೆಯರು ಇಂದು 'ಕ್ಷಿಪಣಿಯಿಂದ ಸಂಗೀತ'ದ ವರೆಗಿನ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಶ್ಲಾಘಿಸಿದ್ದಾರೆ.
0
samarasasudhi
ಆಗಸ್ಟ್ 22, 2023
ನವದೆಹಲಿ: ವಿವಿಧ ಸವಾಲುಗಳನ್ನು ಎದುರಿಸಿ ಮಹಿಳೆಯರು ಇಂದು 'ಕ್ಷಿಪಣಿಯಿಂದ ಸಂಗೀತ'ದ ವರೆಗಿನ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಶ್ಲಾಘಿಸಿದ್ದಾರೆ.
ಸೈನಿಕರ ಪತ್ನಿಯರ ಕಲ್ಯಾಣ ಸಂಘದ (ಎಡಬ್ಲ್ಯುಡಬ್ಲ್ಯುಎ) ವತಿಯಿಂದ ಇಲ್ಲಿನ ಮಾಣೆಕ್ ಷಾ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದರ ಬದಲಾಗಿ ಪ್ರತಿ ಯಶಸ್ವಿ ಪುರುಷನ ಪಕ್ಕ ಒಬ್ಬ ಮಹಿಳೆ ಇರುತ್ತಾಳೆ ಎನ್ನಬೇಕು' ಎಂದಿದ್ದಾರೆ.