ಕೊಟ್ಟಾಯಂ: ರೈಲಿನ ಮೆಟ್ಟಿಲುಗಳ ಮೇಲೆ ಕುಳಿತು ಪ್ರಯಾಣಿಸುತ್ತಿದ್ದಾಗ ನದಿಗೆ ಬಿದ್ದ ಯುವಕ ನಾಪತ್ತೆಯಾಗಿದ್ದಾನೆ. ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಪರಶುರಾಮ್ ಎಕ್ಸ್ ಪ್ರೆಸ್ ನಿಂದ ಯುವಕ ಬಿದ್ದಿದ್ದಾನೆ.
ಇಂದು ಮಧ್ಯಾಹ್ನ 2.45ರ ಸುಮಾರಿಗೆ ಈ ಘಟನೆ ನಡೆದಿದೆ.
ಪಿರವಂ ರೋಡ್ ರೈಲು ನಿಲ್ದಾಣದ ಬಳಿಯ ರೈಲ್ವೇ ಬ್ರಿಡ್ಜ್‍ಗೆ ತಲುಪಿದಾಗ ಪ್ರಯಾಣಿಕ ಕೆಳ ಬಿದ್ದಿದ್ದಾನೆ. ಅಗ್ನಿಶಾಮಕ ದಳ ಹಾಗೂ ಪೋಲೀಸರ ನೇತೃತ್ವದಲ್ಲಿ ಘಟನಾ ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ವೈಕಂ ಮತ್ತು ಕತ್ತೂರ್ತಿಯಿಂದ ಅಗ್ನಿಶಾಮಕ ದಳದ ಘಟಕಗಳು ಶೋಧ ನಡೆಸುತ್ತಿವೆ.





