ಬದಿಯಡ್ಕ: ದೇಶದ ಸ್ವಾತಂತ್ರ್ಯಕ್ಕಾಗಿ ಅದೆμÉ್ಟೂೀ ವೀರರು ಬಲಿದಾನ ಮಾಡಿದ್ದಾರೆ. ನಮ್ಮ ಕರ್ತವ್ಯ ಚೆನ್ನಾಗಿ ನಿರ್ವಹಿಸಿ ದೇಶಸೇವೆ ಮಾಡಬೇಕು ಎಂದು ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜಾ ಭಟ್ ಹೇಳಿದರು.
ಪೆರಡಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಶಾಲಾ ಮುಖ್ಯ ಶಿಕ್ಷಕ ಶಂಕರನಾರಾಯಣ ಪ್ರಕಾಶ ಅವರು ಧ್ವಜಾರೋಹಣ ನೆರವೇರಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಕರೋಡಿ, ಉಪಾಧ್ಯಕ್ಷ ರಾಮ, ಮಾತೃ ರಕ್ಷಕ ಸಂಘದ ಅಧ್ಯಕ್ಷೆ, ಎಸ್.ಎಂ.ಸಿ.ಸದಸ್ಯರು, ರಕ್ಷಕ ಶಿಕ್ಷಕ ಸಂಘದ ಸದಸ್ಯರು ಭಾಗವಹಿಸಿದ್ದರು. ಗೈಡ್ಸ್ ಹಾಗೂ ಜೂನಿಯರ್ ರೆಡ್ ಕ್ರಾಸ್ ಘಟಕದವರಿಂದ ಕಾರ್ಯಕ್ರಮ ಜರುಗಿತು. ಮಕ್ಕಳಿಂದ ದೇಶ ಭಕ್ತಿಗೀತೆ, ಭಾಷಣ ಕಾರ್ಯಕ್ರಮ ನಡೆಯಿತು. ಶ್ರೀಧರ ಭಟ್ ಸ್ವಾಗತಿಸಿ, ಶಾಲಾ ನಾಯಕಿ ಫಾತಿಮಾ ವಂದಿಸಿದರು. ಗೋಪಾಲಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಹಾಶಿಮ್, ಚಂದ್ರಾವತಿ ಸಹಕರಿಸಿದರು.

.jpg)
.jpg)
