ಕಾಸರಗೋಡು: ಜಿಲ್ಲೆಯ ನಾನಾ ಕಡೆ ನಾಗರಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಸೋಮವಾರ ಆಚರಿಸಲಾಯಿತು. ವಿವಿಧ ದೇವಾಲಯ, ನಾಗಬನ, ತರವಾಡು ಮನೆಗಳಲ್ಲಿನ ನಾಗ ಪ್ರತಿಷ್ಠೆಗಳಿಗೆ ಸೀಯಾಳ, ಪಂಚಾಮೃತ, ಹಾಲು ಸೇರಿದಂತೆ ವಿವಿಧ ಅಭಿಷೇಕ ನಡೆಸಲಾಯಿತು.
ಕಾಸರಗೋಡು ಬ್ಯಾಂಕ್‍ರಸ್ತೆಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸನಿಹದ ನಾಗರಾಜಕಟ್ಟೆಯಲ್ಲಿ ನಡೆದ ನಾಗರಪಂಚಮಿ ಕಾರ್ಯಖ್ರಮದಲ್ಲಿ ನೂರಾರು ಮಂದಿ ಭಕ್ತಾದಿಗಳು ಆಗಮಿಸಿ ನಾಗದೇವರಿಗೆ ಸೀಯಾಳ, ಹಾಲು ಸೇರಿದಂತೆ ವಿವಿಧ ಅಭಿಷೇಕ ನಡೆಸಿದರು. ಮಾರುಕಟ್ಟೆಯಲ್ಲಿ ಸೀಯಾಳ, ಬಾಳೆಹಣ್ಣು, ಹಾಲಿಗೆ ಭಾರಿ ಬೇಡಿಕೆ ಕಂಡುಬಂದಿತ್ತು. ಜಿಲ್ಲೆಯ ಕೆಲವೆಡೆ ಆ. 22ರಂದೂ ನಾಗರಪಂಚಮಿ ಅಂಗವಾಗಿ ನಾಗಾರಾಧನೆ ನಡೆಯಲಿದೆ.
ಫೋಟೋ: ಕಾಸರಗೋಡು ಬ್ಯಾಂಕ್ ರಸ್ತೆಯ ನಾಗರಾಜಕಟ್ಟೆಯಲ್ಲಿ ನಾಗರಪಂಚಮಿ ಅಂಗವಾಘಿ ಶ್ರೀನಾಗದೇವರಿಗೆ ಅಭಿಷೇಕ ನಡೆಯಿತು.





