HEALTH TIPS

ಮಣಿಪುರ-ಮ್ಯಾನ್ಮರ್‌ ಗಡಿ ಭಾಗ: ರಕ್ಷಣಾ ಪಡೆಗಳ ತೆರವಿಗೆ ಪಟ್ಟು

              ಇಂಫಾಲ್‌: ಮಣಿಪುರ-ಮ್ಯಾನ್ಮರ್‌ ಗಡಿ ಭಾಗದ ಮೊರೆಹ್ ಪಟ್ಟಣಕ್ಕೆ ರಕ್ಷಣಾ ಪಡೆಗಳನ್ನು ನಿಯೋಜಿಸಿರುವುದಕ್ಕೆ ಕುಕಿ-ಜೋ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ.

            ಮೊರೆಹ್‌ಗೆ ನಿಯೋಜಿಸಿರುವ ರಕ್ಷಣಾ ಪಡೆಗಳನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಮಣಿಪುರದ ಚುರಚಂದಪುರದಲ್ಲಿ ಸೋಮವಾರ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು.

            ಎರಡು ದಿನಗಳ ಹಿಂದೆಯೂ ಈ ಪಟ್ಟಣಕ್ಕೆ ತೆರಳುತ್ತಿದ್ದ ಇಂಡಿಯನ್‌ ರಿಸರ್ವ್‌ ಬೆಟಾಲಿಯನ್‌, ಮಣಿಪುರ ರೈಫಲ್ಸ್‌ ಮತ್ತು ಕಮಾಂಡೊ ಪಡೆಗೆ ಸೇರಿದ 10 ವಾಹನಗಳಿಗೆ ಅಡ್ಡಿಪಡಿಸಿದ್ದರು.

                ಶೀಘ್ರವೇ, ರಕ್ಷಣಾ ಪಡೆಗಳನ್ನು ವಾಪಸ್‌ ಕರೆಯಿಸಿಕೊಳ್ಳಬೇಕು. ಇಲ್ಲವಾದರೆ ಕಣಿವೆ ಜಿಲ್ಲೆಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries