ತಿರುವನಂತಪುರಂ: ರಾಜ್ಯದಲ್ಲಿರುವ ಅನ್ಯರಾಜ್ಯ ಕಾರ್ಮಿಕರ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ನೋಂದಣಿ ಪ್ರಕ್ರಿಯೆ ಇಂದು ಆರಂಭವಾಗಿದೆ.
ಅನ್ಯರಾಜ್ಯ ಕಾರ್ಮಿಕರು ನೇರವಾಗಿ ಮತ್ತು ಗುತ್ತಿಗೆ-ಉದ್ಯೋಗದಾತರ ಮೂಲಕ ನೋಂದಾಯಿಸಿಕೊಳ್ಳಬಹುದು. ಕಾರ್ಮಿಕ ಇಲಾಖೆಯು ಕಚೇರಿಗಳು, ಕೆಲಸದ ಸ್ಥಳಗಳು ಮತ್ತು ಕಾರ್ಮಿಕ ಶಿಬಿರಗಳಲ್ಲಿ ನೋಂದಣಿಗೆ ಅಗತ್ಯ ಸೌಲಭ್ಯಗಳನ್ನು ಸ್ಥಾಪಿಸುತ್ತದೆ.
ಮೊಬೈಲ್ ಸಂಖ್ಯೆ ಬಳಸಿ ಹೆಸರು ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಲು ಪೋರ್ಟಲ್‍ನಲ್ಲಿ ಸ್ಥಳೀಯ ಭಾμÉಗಳಲ್ಲಿ ಸಹ ಸೂಚನೆಗಳು ಲಭ್ಯವಿದೆ. ನೋಂದಣಿ ಅಧಿಕಾರಿಯು ನೋಂದಣಿಗಾಗಿ ಒದಗಿಸಲಾದ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸುತ್ತಾರೆ ಮತ್ತು ನೋಂದಾಯಿಸುತ್ತಾರೆ. ಬಳಿಕ, ಅವರಿಗೆ ವಿಶಿಷ್ಟ ಐಡಿಯನ್ನು ನಿಗದಿಪಡಿಸಿದ ನಂತರ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ಆದಷ್ಟು ಬೇಗ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕಾರ್ಮಿಕ ಇಲಾಖೆ ಸೂಚಿಸಿದೆ.
ನೋಂದಣಿಯನ್ನು ಇನ್ನಷ್ಟು ಸುಲಭಗೊಳಿಸಲು ವಿನ್ಯಾಸಗೊಳಿಸಲಾದ ಅತಿಥಿ ಮೊಬೈಲ್ ಅಪ್ಲಿಕೇಶನ್ ಅಂತಿಮ ಹಂತದಲ್ಲಿದೆ. ಅಪ್ಲಿಕೇಶನ್ ಲೈವ್ ಆದ ನಂತರ, ಕಾರ್ಮಿಕರು ತಮ್ಮ ಹೆಸರನ್ನು ಪೋರ್ಟಲ್ ಅಥವಾ ಅಪ್ಲಿಕೇಶನ್‍ನಲ್ಲಿ ನೋಂದಾಯಿಸಲು ಸಾಧ್ಯವಾಗುತ್ತದೆ. ಆವಾಸ್ ವಿಮೆ ಸೇರಿದಂತೆ ಎಲ್ಲಾ ಪ್ರಯೋಜನಗಳಿಗೆ ವಿಶಿಷ್ಟ ಐಡಿ ಕಡ್ಡಾಯವಾಗಿರುತ್ತದೆ.





