ಕಾಸರಗೋಡು: ನೀಲೇಶ್ವರ ತೈಕಡಪ್ಪುರದಲ್ಲಿ ಸಮುದ್ರದಲ್ಲಿ ಬಲೆಬೀಸಿ ಮೀನು ಹಿಡಿಯುವ ಮಧ್ಯೆ ಸಮುದ್ರದ ನೀರಿಗೆ ಬಿದ್ದು ಮೀನುಕಾರ್ಮಿಕ ಹಾಗೂ ಇವರನ್ನು ರಕ್ಷಿಸಲು ಮುಂದಾದ ರಕ್ಷಣಾ ಸಿಬ್ಬಂದಿ ದಾರುಣಾಗಿ ಮೃತಪಟ್ಟಿದ್ದಾರೆ.
ನೀಲೇಶ್ವರ ತೈಕಡಪ್ಪುರ ಬೋಟ್ ಜೆಟ್ಟಿ ಸನಿಹದ ನಿವಾಸಿ ಮಲ್ಲಕ್ಕರ ದಾಮೋದರನ್ ಅವರ ಪುತ್ರ ಪಿ.ಟಿ ರಾಜೇಶ್(38) ಹಾಗೂ ಕರಾವಳಿ ರಕ್ಷಣಾ ಪಡೆ ರಿಸ್ಕ್ಯೂ ಬೋಟ್ ಸಿಬ್ಬಂದಿ ಸನೀಶ್ ಮೃತಪಟ್ಟವರು. ನೀರಿಗೆ ಬಿದ್ದ ರಾಜೇಶ್ ಅವರನ್ನು ರಕ್ಷಿಸಲು ಸನೀಶ್ ನೀರಿಗೆ ಧುಮುಕಿದ್ದು, ಭಾರಿ ತೆರೆಗೆ ಸಿಲುಕಿ ಇಬ್ಬರೂ ನಾಪತ್ತೆಯಾಗಿದ್ದರು. ತಕ್ಷಣ ಇತರ ಮೀನುಗಾರರು ಹಾಗೂ ರೆಸ್ಕ್ಯೂ ಗಾರ್ಡ್‍ಗಳು ಇಬ್ಬರನ್ನೂ ದಡಕ್ಕೆ ತಂದು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ.



