ತ್ರಿಶೂರ್: ಹೆಲ್ಮೆಟ್ ಧರಿಸದ ಕಾರಣಕ್ಕೆ ಕಾರು ಮಾಲೀಕರಿಗೆ ದಂಡ ವಿಧಿಸಲಾಗಿದೆ. ಮಲಪ್ಪುರಂ ಸಂಚಾರ ಪೋಲೀಸರು ತ್ರಿಶೂರ್‍ನ ಕಾರು ಮಾಲೀಕರಿಗೆ 500 ರೂಪಾಯಿ ದಂಡ ವಿಧಿಸಿದ್ದಾರೆ.
ವಾಹನದ ನಂಬರ್‍ನಲ್ಲಿ ತಪ್ಪಾದ ಕಾರಣ ಕಾರು ಮಾಲೀಕರಿಗೆ ನೋಟಿಸ್ ಬಂದಿದೆ.
ಜಿಲ್ಲೆಯಿಂದ ಹೊರಕ್ಕೆ ಒಮ್ಮೆಯೂ ತೆರಳದ ಕಾರಿಗೆ ದಂಡ ಕಟ್ಟಲು ಮಲಪ್ಪುರಂನಿಂದ ನೋಟೀಸ್ ಬಂದಿರುವುದು ಕಾರು ಮಾಲೀಕರಿಗೆ ತಬ್ಬಿಬ್ಬು ಉಂಟಾಗಲು ಕಾರಣವಾಯಿತು. ಬೈಕ್ ದಾಖಲು ಸಂಖ್ಯೆಯೊಂದಿಗೆ ಸಾದೃಶ್ಯವಿದ್ದ ಕಾರು ನಂಬರ್‍ಗೆ ದಂಡಕಟ್ಟಲು ನೋಟೀಸ್ ಬಂದಿದೆ.
ಕಾರಿನ ಸಂಖ್ಯೆ ಕೆಎಲ್ 8880. ಆದರೆ ಬೈಕ್ ನ ನಂಬರ್ ಕೆಎಲ್ ಎಚ್ 8880 ಆಗಿದೆ. ಆಗ ಮೋಟಾರು ವಾಹನ ಇಲಾಖೆಯಿಂದ ಕಾರ್ ಮಾಲೀಕರ ಸಂಖ್ಯೆಗೆ ಸಂದೇಶ ಬಂದಿದೆ. ಕಳೆದ ನವೆಂಬರ್‍ನಲ್ಲಿ ಈ ಘಟನೆ ನಡೆದಿದೆ. ದಂಡ ಪಾವತಿಸದಿದ್ದ ಕಾರಣ ನ್ಯಾಯಾಲಯಕ್ಕೆ ನೋಟಿಸ್ ಕಳುಹಿಸಲಾಗಿದೆ.




