ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಬಣದ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರ ವಿರುದ್ಧ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಶಾಸಕ ಸಂಜಯ್ ಶಿರ್ಸಾತ್ ಟೀಕೆ ಮಾಡಿದ್ದಾರೆ.
0
samarasasudhi
ಆಗಸ್ಟ್ 01, 2023
ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಬಣದ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರ ವಿರುದ್ಧ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಶಾಸಕ ಸಂಜಯ್ ಶಿರ್ಸಾತ್ ಟೀಕೆ ಮಾಡಿದ್ದಾರೆ.
ಆದಿತ್ಯ ಠಾಕ್ರೆ ಅವರು ಪ್ರಿಯಾಂಕಾ ಚತುರ್ವೇದಿ ಅವರ ಸೌಂದರ್ಯ ನೋಡಿ ರಾಜ್ಯಸಭೆಗೆ ಕಳುಹಿಸಿದ್ದಾರೆ ಎಂದು ಶಾಸಕ ಸಂಜಯ್ ಶಿರ್ಸಾತ್ ಹೇಳಿದ್ದಾರೆ.
ಸಂಜಯ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚತುರ್ವೇದಿ, ಸಂಜಯ್ ತನ್ನ ಆತ್ಮ ಮತ್ತು ಸಮಗ್ರತೆಯನ್ನು ಮಾರಿಕೊಂಡ ದೇಶದ್ರೋಹಿ. ನಾನು ಹೇಗೆ ಕಾಣಿಸುತ್ತೇನೆ, ನಾನು ಎಲ್ಲಿದ್ದೇನೆ ಎಂದು ದೇಶದ್ರೋಹಿ ಹೇಳುವ ಅಗತ್ಯವಿಲ್ಲ. ಅವರು ರಾಜಕೀಯ ಮತ್ತು ಮಹಿಳೆಯರ ಬಗ್ಗೆ ಹೊಂದಿರುವ ರೋಗಗ್ರಸ್ಥ ಮನಸ್ಥಿತಿಯನ್ನು ಇದು ತೋರಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯ ಠಾಕ್ರೆ, ಸಂಜಯ್ ಶಿರ್ಸಾತ್ ಕೊಳಕು ಮನಸ್ಸು ಹೊಂದಿದ್ದು, ಅವರ ಯೋಗ್ಯತೆಯನ್ನು ಇದು ತೋರಿಸುತ್ತದೆ. ಇಂತಹ ಕೆಟ್ಟ ಮನಸ್ಥಿತಿಯವರು ರಾಜಕೀಯದಲ್ಲಿ ಹೇಗೆ ಉಳಿದುಕೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಚತುರ್ವೇದಿ ಅವರು 2019ರಲ್ಲಿ ಕಾಂಗ್ರೆಸ್ ತೊರೆದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಸೇರಿ, ರಾಜ್ಯಸಭಾ ಸಂಸದರಾಗಿದ್ದಾರೆ.