ಕೊಚ್ಚಿ: ಮುಸ್ಲಿಂ ಲೀಗ್ ಮುಖಂಡ ಹಾಗೂ ಮಂಜೇಶ್ವರದ ಮಾಜಿ ಶಾಸಕ ಎಂ ಸಿ ಕಮರುದ್ದೀನ್ ಅವರನ್ನು ಒಳಗೊಂಡ ಬಹುಕೋಟಿ ಫ್ಯಾಷನ್ ಗೋಲ್ಡ್ ಜುವೆಲ್ಲರಿ ಹಗರಣದ ತನಿಖೆಯು ಮೂರು ವರ್ಷಗಳಿಂದ ಆಮೆಗತಿಯಲ್ಲಿದ್ದು ತನಿಖೆಯಲ್ಲಿ ಅಲ್ಪ ಪ್ರಗತಿಯಾಗಿದೆ. ಅಪರಾಧ ವಿಭಾಗದ ವಿಶೇಷ ತನಿಖಾ ತಂಡ (ಎಸ್‍ಐಟಿ) ಇದುವರೆಗೆ 168 ಪ್ರಕರಣಗಳನ್ನು ದಾಖಲಿಸಿದ್ದು, 24 ಆರೋಪಿಗಳನ್ನು ಇನ್ನೂ ಬಂಧಿಸಬೇಕಿದೆ.
ನಿರ್ದೇಶಕರು ಸೇರಿದಂತೆ ಹಲವು ಆರೋಪಿಗಳು ಬಂಧನದಿಂದ ತಪ್ಪಿಸಿಕೊಳ್ಳಲು ಗಲ್ಫ್ ರಾಷ್ಟ್ರಗಳಿಗೆ ತೆರಳಿರುವುದರಿಂದ ಸಂತ್ರಸ್ತರು ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿ ಹೈಕೋರ್ಟ್‍ನ ಮೊರೆ ಹೋಗಿದ್ದರು.
ತನಿಖೆಯ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಆರೋಪಿಗಳ ಬಂಧನಕ್ಕೆ ಮುಂದಾಗಿರುವ ಕ್ರಮಗಳನ್ನು ವಿವರಿಸುವಂತೆ ಎಸ್‍ಐಟಿಗೆ ಸೂಚಿಸಿದೆ. ಆಗಸ್ಟ್ 10ರಂದು ಹೆಚ್ಚುವರಿ ಹೇಳಿಕೆ ದಾಖಲಿಸುವಂತೆ ಪ್ರಾಸಿಕ್ಯೂಟರ್‍ಗೆ ಸೂಚಿಸಲಾಗಿದೆ.
ತನಿಖೆಯ ನಂತರ ಮಾಜಿ ಶಾಸಕ ಸೇರಿದಂತೆ ನಾಲ್ಕು ಹಾಗೂ ಎಂಟನೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‍ಐಟಿ ತಿಳಿಸಿದೆ. ಒಂಬತ್ತನೇ ಆರೋಪಿ, ವೈದ್ಯ ಟಿ ಕೆ ಪೂಕ್ಕೋಯ ತಂಙಳ್ ಅವರ ಪುತ್ರ ಚಂದೇರಾದ ಹಿಶಾಮ್ ಅಂಚರಪ್ಪಟ್ಟಿಲ್ ಪ್ರಸ್ತುತ ಗಲ್ಫ್‍ನಲ್ಲಿದ್ದಾನೆ. ಆತನ ವಿರುದ್ಧ ಲುಕೌಟ್ ಸುತ್ತೋಲೆ ಹೊರಡಿಸಲಾಗಿದೆ. ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಕೂಡ ಯೋಜಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಹೂಡಿಕೆದಾರರನ್ನು ವಂಚಿಸುವ ಉದ್ದೇಶದಿಂದ ಆರೋಪಿಗಳು 2008ರಲ್ಲಿ ಆಕರ್ಷಕ ಆದಾಯ ನೀಡುವ ಮೂಲಕ ಠೇವಣಿ ಸ್ವೀಕರಿಸಲು ಆರಂಭಿಸಿದ್ದರು. ವಿವಿಧ ಪೋಲೀಸ್ ಠಾಣೆಗಳಲ್ಲಿ ಬಂದಿರುವ ದೂರುಗಳ ಪ್ರಕಾರ ಫ್ಯಾಷನ್ ಗೋಲ್ಡ್ ಗ್ರೂಪ್ ಕಂಪನಿಗಳು ಒಟ್ಟು 26,14,95,229 ರೂ. 13 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿರುವುದಾಗಿ ಎಸ್‍ಐಟಿ ತಿಳಿಸಿದೆ ಮತ್ತು ಕರಡು ಆರೋಪಗಳನ್ನು ಪೆÇಲೀಸ್ ಮಹಾನಿರೀಕ್ಷಕರಿಂದ ಅನುಮೋದನೆಗಾಗಿ ಕಳುಹಿಸಲಾಗುತ್ತಿದೆ. ಈ ಹಂತದಲ್ಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವುದರಿಂದ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಲ್ಲಿ ಅನಗತ್ಯ ವಿಳಂಬವಾಗುತ್ತದೆ ಎಂದು ಅದು ಹೇಳಿದೆ.
ಪಡನ್ನದ ಮಿಸಿರಿಯ ವಿಕೆಟಿ ಮತ್ತಿತರರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಎಸ್‍ಐಟಿ ಹೇಳಿಕೆ ನೀಡಿದ್ದು, ತನಿಖೆ ವಿಳಂಬಕ್ಕೆ ಕಾರಣಗಳ ಕುರಿತು ವರದಿ ನೀಡುವಂತೆ ಕೋರಲಾಗಿತ್ತು. ತನಿಖೆಯನ್ನು ಸರಿಯಾಗಿ ನಡೆಸಲಾಗುತ್ತಿದೆ ಎಂದು ತಂಡವು ಸಮರ್ಥಿಸಿಕೊಂಡಿದೆ ಮತ್ತು 'ಠೇವಣಿ ತೆಗೆದುಕೊಳ್ಳುವವರ' ವಿರುದ್ಧ ಬಿ.ಯು.ಡಿ.ಎಸ್. ಕಾಯ್ದೆಯನ್ನು ಅನ್ವಯಿಸಲಾಗಿದೆ ಮತ್ತು ಕಂಪನಿಗಳ ನಿರ್ದೇಶಕರನ್ನು ಸಹ ಆರೋಪಿಗಳಾಗಿ ವಿಂಗಡಿಸಲಾಗಿದೆ. ನಾಲ್ಕು ಕಂಪನಿಗಳು, ಫ್ಯಾಷನ್ ಗೋಲ್ಡ್ ಇಂಟನ್ರ್ಯಾಷನಲ್ (ಪಿ) ಲಿಮಿಟೆಡ್, ಕಮರ್ ಫ್ಯಾಷನ್ ಗೋಲ್ಡ್ (ಪಿ) ಲಿಮಿಟೆಡ್, ಫ್ಯಾಶನ್ ಆರ್ನಮೆಂಟ್ಸ್ (ಪಿ) ಲಿಮಿಟೆಡ್, ಮತ್ತು ನುಜುಮ್ ಗೋಲ್ಡ್ (ಪಿ) ಲಿಮಿಟೆಡ್ ಎಂಬವುಗಳು ಆರೋಪಿಗಳು ಸ್ಥಾಪಿಸಿದ ಸಂಸ್ಥೆಗಳಾಗಿದ್ದು, ಒಟ್ಟು 34 ಆರೋಪಿಗಳು ವಿವಿಧ ಎಫ್‍ಐಆರ್‍ಗಳಲ್ಲಿ ಹೆಸರಿಸಲಾಗಿದೆ. 34 ಮಂದಿಯಲ್ಲಿ ಇಬ್ಬರು ಮೃತಪಟ್ಟಿದ್ದು, 11ನೇ ಆರೋಪಿ ನಿರೀಕ್ಷಣಾ ಜಾಮೀನು ಪಡೆದಿದ್ದಾನೆ ಎಂದು ಎಸ್‍ಐಟಿ ನ್ಯಾಯಾಲಯಕ್ಕೆ ತಿಳಿಸಿದೆ.





