ಮಹಾರಾಷ್ಟ್ರ: ಮಳೆಯಲ್ಲಿ ಒದ್ದೆಯಾಗದೇ ಇರಲು ಛತ್ರಿ ಹಿಡಿದು ಓಡಾಡುವವರನ್ನು ಹಲವರು ನೋಡಿದ್ದೇವೆ. ಆದರೆ, ಛತ್ರಿ ಹಿಡಿದು ಬಸ್ ಓಡಿಸುವುದನ್ನು ನೋಡಿದ್ದೀರಾ? ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಳೆಯಿಂದ ತಪ್ಪಿಸಿಕೊಳ್ಳಲು ಚಾಲಕರೊಬ್ಬರು ಛತ್ರಿ ಹಿಡಿದು ಬಸ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿದೆ ಎಂದು ತಿಳಿದುಬಂದಿದೆ.ಮಹಾರಾಷ್ಟ್ರದ ಕೆಲವು ಕಡೆ ಮೇಲ್ಛಾವಣಿ ಒಡೆದು ಬಸ್ಗಳನ್ನು ಸಾರ್ವಜನಿಕರ ಸಂಚಾರಕ್ಕೆ ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇದನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) ಬಸ್ ಎಂದು ಗುರುತಿಸಲಾಗಿದೆ. ಗಡ್ಚಿರೋಲಿ-ಅಹೇರಿ ರಸ್ತೆಯಲ್ಲಿ ಚಾಲಕ ಇಂತಹ ಟಾಪ್ ಲೆಸ್ ಬಸ್ ಓಡಿಸುತ್ತಿದೆ. ಆದರೆ, ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಬಸ್‌ನ ಮೇಲ್ಛಾವಣಿಯ ರಂಧ್ರವು ಸೋರಲು ಪ್ರಾರಂಭಿಸಿತು. ಹೀಗಾಗಿ ಚಾಲಕ ಛತ್ರಿಯನ್ನು ಹಿಡಿದುಕೊಂಡು ಬಸ್ ಓಡಿಸಲು ಆರಂಭಿಸಿದ. ಚಾಲಕ ಒಂದೇ ಕೈಯಿಂದ ಬಸ್ ಓಡಿಸುತಿದ್ದಾನೆ.
ಈ ವಿಡಿಯೋ ನೋಡಿದರೆ ಆತಂಕವಾಗುತ್ತಿದೆ. ಇಂತಹ ರಿಸ್ಕ್ ತೆಗೆದುಕೊಂಡು ಬಸ್ ಓಡಿಸುವುದರಿಂದ ಚಾಲಕನಿಗೆ, ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಹಾಗೂ ರಸ್ತೆಯಲ್ಲಿ ಹೋಗುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.