ತಿರುವನಂತಪುರ: "ಅತಿದೊಡ್ಡ ಪ್ರಜಾಪ್ರಭುತ್ವದ ನಾಗರಿಕರಾಗಿ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಪೆÇೀಷಿಸುವ ಮೂಲಕ ಮತ್ತು ಅತ್ಯುನ್ನತ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಎಲ್ಲರಿಗೂ ಹೆಚ್ಚು ಗೌರವಯುತವಾದ ಜೀವನವನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ ಎಂದು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು 77ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ದೇಶಭಕ್ತರ ಕನಸುಗಳನ್ನು ನನಸಾಗಿಸಲು ನಮ್ಮನ್ನು ನಾವು ಸಮರ್ಪಿಸಿಕೊಳ್ಳುವ ಮೂಲಕ ಆ ದೇಶಭಕ್ತರನ್ನು ಸ್ಮರಿಸೋಣ. ಭಾರತೀಯರಾದ ನಮ್ಮ ಪ್ರತಿಯೊಂದು ಕ್ರಿಯೆಯು ಸಮಗ್ರ ಪ್ರಗತಿ ಮತ್ತು ಸಂಪೂರ್ಣ ಸ್ವಾವಲಂಬನೆಯತ್ತ ಭಾರತದ ಅಮೃತ ಪಯಣಕ್ಕೆ ಶಕ್ತಿ ನೀಡಲಿ' ಎಂದು ರಾಜ್ಯಪಾಲರು ಹಾರೈಸಿದರು.
ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಿರುವನಂತಪುರಂ ಸೆಂಟ್ರಲ್ ಸ್ಟೇಡಿಯಂನಲ್ಲಿ ಬೆಳಗ್ಗೆ ಒಂಬತ್ತು ಗಂಟೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಧ್ವಜಾರೋಹಣ ಮಾಡುವುದರೊಂದಿಗೆ ಕೇರಳದಲ್ಲಿ ಸಂಭ್ರಮಾಚರಣೆ ನಡೆಯಿತು. ವಿವಿಧ ಸಶಸ್ತ್ರ ಪಡೆಗಳು ಮತ್ತು ಇತರ ಸಶಸ್ತ್ರೇತರ ಪಡೆಗಳು, ಎನ್‍ಸಿಸಿ, ಸ್ಕೌಟ್ಸ್, ಗೈಡ್ಸ್ ಮತ್ತು ಸ್ಟೂಡೆಂಟ್ಸ್ ಪೆÇಲೀಸ್ ಕೆಡೆಟ್‍ಗಳ ಪರೇಡ್ ನಡೆಯಿತು. ಮುಖ್ಯಮಂತ್ರಿಗಳು ಗೌರವ ವಂದನೆ ಸ್ವೀಕರಿಸಿದರು. ನಂತರ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ರಾಷ್ಟ್ರಪತಿಗಳ ಪೋಲೀಸ್ ಪದಕಗಳು, ಅಗ್ನಿಶಾಮಕ ಸೇವಾ ಪದಕಗಳು, ಸುಧಾರಣಾ ಸೇವಾ ಪದಕಗಳು ಮತ್ತು ವಿಶಿಷ್ಟ ಸೇವೆಗಾಗಿ ಜೀವ ಉಳಿಸುವ ಪದಕಗಳನ್ನು ಮುಖ್ಯಮಂತ್ರಿ ಪ್ರದಾನ ಮಾಡಿದರು.


