ಕಾಸರಗೋಡು: ಕಾರ್ಮಿಕ ಇಲಾಖೆಯು ಜಿಲ್ಲೆಯಲ್ಲಿ ಇತರ ರಾಜ್ಯಗಳ ಕಾರ್ಮಿಕರು ವಾಸಿಸುತ್ತಿರುವ ಕಾರ್ಮಿಕ ಶಿಬಿರಗಳು ಮತ್ತು ವಸತಿ ಪ್ರದೇಶಗಳಿಗೆ ಭೇಟಿ ನೀಡಿ ತಪಾಸಣೆ ಪ್ರಾರಂಭಿಸಿದೆ. ಜಿಲ್ಲಾ ಕಾರ್ಮಿಕ ಅಧಿಕಾರಿ ಅವಿನಾಶ್ ಸುಂದರ್ ಅವರ ನೇತೃತ್ವದ ಅಧಿಕಾರಿಗಳ ತಂಡ, ಕಾರ್ಮಿಕರ ಜೀವನ ಮಟ್ಟ, ನೈರ್ಮಲ್ಯದ ಬಗ್ಗೆ ತಪಾಸಣೆ ನಡೆಸುತ್ತಿದೆ. ಇತರ ರಾಜ್ಯ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ ಅವರ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ತಂಡ ಮಾಹಿತಿ ಸಂಗ್ರಹಿಸುತ್ತಿದೆ. ಮುಂದಿನ ದಿನಗಳಲ್ಲಿ ಶಿಬಿರಗಳನ್ನು ಪರಿಶೀಲಿಸಿ ದೈನಂದಿನ ಕಾರ್ಯಗಳು ತೃಪ್ತಿಕರವಾಗಿರುವಂತೆ ಮತ್ತು ದೂರು ರಹಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ. ಮೂರು ದಿನಗಳ ಕಾಲ ನಡೆದ ತಪಾಸಣೆಯಲ್ಲಿ ಸಹಾಯಕ ಕಾರ್ಮಿಕ ಅಧಿಕಾರಿ ಗ್ರೇಡ್ ಒನ್ ಎಂ.ಜಯಕೃಷ್ಣ, ಸಹಾಯಕ ಕಾರ್ಮಿಕ ಅಧಿಕಾರಿ ಗ್ರೇಡ್ ಟು ಎಂ.ಟಿ.ಪಿ.ಫೈಸಲ್, ಕೆ.ಎ. ಶ್ರೀಜಾ ಭಾಗವಹಿಸಿದ್ದರು.


