ಕೊಯಿಕ್ಕೊಡ್: ಕಾರಿನ ಹಾರ್ನ್ ಮಾಡಿದ್ದಕ್ಕಾಗಿ ನಗರದ ಮಧ್ಯಭಾಗದಲ್ಲಿಯೇ ವೈದ್ಯನಿಗೆ ಅಮಾನುಷವಾಗಿ ಥಳಿಸಿರುವ ಘಟನೆ ಕೇರಳದ ಕೊಯಿಕ್ಕೊಡ್ನಲ್ಲಿ ನಡೆದಿದ
0
samarasasudhi
ಆಗಸ್ಟ್ 07, 2023
ಕೊಯಿಕ್ಕೊಡ್: ಕಾರಿನ ಹಾರ್ನ್ ಮಾಡಿದ್ದಕ್ಕಾಗಿ ನಗರದ ಮಧ್ಯಭಾಗದಲ್ಲಿಯೇ ವೈದ್ಯನಿಗೆ ಅಮಾನುಷವಾಗಿ ಥಳಿಸಿರುವ ಘಟನೆ ಕೇರಳದ ಕೊಯಿಕ್ಕೊಡ್ನಲ್ಲಿ ನಡೆದಿದ
ಪೆರಂಪ್ರ ಪೈಥೋತ್ ಜಿದತ್ (25) ಎಂಬಾತನೇ ಹಲ್ಲೆ ಮಾಡಿದ ಆರೋಪಿಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ವೈದ್ಯ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಆಗ ವೈದ್ಯರು ಕೂಡಲೇ, ಯುವಕನ ಕಾರನ್ನು ಓವರ್‌ಟೇಕ್ ಮಾಡಿ ಮುಂದೆ ಹೋಗಿದ್ದಾರೆ. ಇಷ್ಟಾದರೂ ಸಹಿತ ಯುವಕನು ವೈದ್ಯನನ್ನು ಬಿಡದೇ ಹಿಂಬಾಲಿಸಿಕೊಂಡು ಹೋಗಿ ಪಿಟಿ ಉಷಾ ಜಂಕ್ಷನ್‌ನಲ್ಲಿ ವೈದ್ಯರ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಗಾಜು ಇಳಿಸಿದ ವೈದ್ಯನ ಮೇಲೆ ಹಲ್ಲೆ ನಡೆಸಿದ್ದಾನೆ. ಕೂಡಲೇ, ವೈದ್ಯನನ್ನು ಇತರ ವಾಹನಗಳ ಪ್ರಯಾಣಿಕರು ರಕ್ಷಿಸಿದ್ದು, ಯುವಕನ ವಿರುದ್ಧ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ವೈದ್ಯನಿಗೆ ಸಣ್ಣಪುಟ್ಟ ಗಾಯಗಳಾಗಿವೆ.