ವಾಷಿಂಗ್ಟನ್ (PTI); ಕಾಶ್ಮೀರ ಸಮಸ್ಯೆ ಹಾಗೂ ಭಾರತದ ಬಗ್ಗೆ ಕ್ಷುಲ್ಲಕ ಆರೋಪ ಮಾಡುವ ಬದಲು ತನ್ನ ಆಂತರಿಕ ವಿಷಯಗಳನ್ನು ಬಗೆಹರಿಸುವತ್ತ ಗಮನ ಹರಿಸುವಂತೆ ಭಾರತವು ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚರ್ಚೆಯ ವೇಳೆ ಪಾಕಿಸ್ತಾನದ ಪ್ರತಿನಿಧಿಯೊಬ್ಬರು ಎತ್ತಿದ ಕಾಶ್ಮೀರದ ವಿಷಯಕ್ಕೆ ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ಆರ್. ಮಧುಸೂದನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
'ಚರ್ಚೆಯ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳಲು ಹಾಗೂ ನಿಯೋಗವು ನಮ್ಮ ದೇಶದ ವಿರುದ್ಧ ಕ್ಷುಲ್ಲಕ ಆರೋಪ ಮಾಡುವುದಕ್ಕಿಂತ ತಮ್ಮ ಆಂತರಿಕ ವಿಷಯ ಬಗೆಹರಿಸಲು ಮತ್ತು ಗಡಿಯಲ್ಲಿ ಶಾಂತಿ ಮರುಸ್ಥಾಪಿಸಲು ಸೂಚಿಸುತ್ತೇನೆ' ಎಂದು ಮಧು ಸೂದನ್ ಅವರು ಹೇಳಿದ್ದಾರೆ.