HEALTH TIPS

ಇಸ್ರೋ ನೇಮಕಾತಿ ಪರೀಕ್ಷೆಯಲ್ಲಿ ನಕಲು; ಇಬ್ಬರ ಬಂಧನ

                ತಿರುವನಂತಪುರಂ :ಭಾನುವಾರ (ಆಗಸ್ಟ್ 20) ನಡೆದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನೇಮಕಾತಿ ಪರೀಕ್ಷೆ ಬರೆಯಲು ನೋಂದಣಿಯಾಗಿದ್ದ ಅಭ್ಯರ್ಥಿಗಳ ಬದಲಿಗೆ ಹಾಜರಾಗಿದ್ದ ಇಬ್ಬರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕೇರಳದ ತಿರುವನಂತಪುರಂನಲ್ಲಿ ವರದಿಯಾಗಿದೆ.

               ಆರೋಪಿಗಳನ್ನು ಹರಿಯಾಣ ಮೂಲದ ಸುನೀಲ್ ಕುಮಾರ್ ಮತ್ತು ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ. ಇಸ್ರೋ ನೇಮಕಾತಿ ಪರೀಕ್ಷೆಗೆ ಹಾಜರಾಗಬೇಕಿದ್ದ ಇಬ್ಬರು ಅಭ್ಯರ್ಥಿಗಳ ಜಾಗಕ್ಕೆ ಇತರ ಇಬ್ಬರು ಪರೀಕ್ಷೆಗೆ ಹಾಜರಾಗಿದ್ದರು. ಮನೋಜ್ ಕುಮಾರ್ ಎಂಬಾತ ಸುಮಿತ್ ಎಂಬ ವ್ಯಕ್ತಿಯ ಬದಲಿಗೆ ಬಂದು ಪರೀಕ್ಷೆ ಬರೆಯುತ್ತಿದ್ದರು ಎನ್ನಲಾಗಿದೆ.

               ಸುನೀಲ್ ಮತ್ತು ಮನೋಜ್ ಇಬ್ಬರೂ ಪ್ರಶ್ನೆ ಪತ್ರಿಕೆಯನ್ನು ಹೊರಗೆ ಕಳುಹಿಸಲು ಬ್ಲೂಟೂತ್ ಸಾಧನಗಳು ಮತ್ತು ಮೊಬೈಲ್ ಫೋನ್‌ಗಳನ್ನು ಬಳಸಿದ್ದಾರೆ. ಹೊರಗಿನಿಂದ ಉತ್ತರಗಳನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ಘಟನೆ ಬಗ್ಗೆ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಕೂಡಲೇ ಇಬ್ಬರನ್ನು ಸೆರೆಹಿಡಿದಿದ್ದಾರೆ.

                ಮ್ಯೂಸಿಯಂ ಪೊಲೀಸರು ಮತ್ತು ವೈದ್ಯಕೀಯ ಕಾಲೇಜು ಪೊಲೀಸರು ಭಾನುವಾರ ತಿರುವನಂತಪುರಂನ ಎರಡು ವಿಭಿನ್ನ ಕೇಂದ್ರಗಳಿಂದ ಈ ಇಬ್ಬರನ್ನು ಬಂಧನಕ್ಕೆ ಒಳಪಡಿಸಿದ್ದಾರೆ. ಸುನೀಲ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 420, 406 ಮತ್ತು 419ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ,


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries