HEALTH TIPS

ಮನೆಯಲ್ಲಿಯೇ ಸುಲಭವಾಗಿ ಫ್ರೆಂಚ್ ಫ್ರೈಸ್ ಮಾಡೋದು ಹೇಗೆ?

 ಫ್ರೆಂಚ್ ಫ್ರೈಸ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅಲೂಗಡ್ಡೆಯನ್ನು ಇಷ್ಟ ಪಡದವರೂ ಕೂಡ ಫ್ರೆಂಚ್ ಫ್ರೈಸ್ ಅನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಫ್ರೆಂಚ್ ಫ್ರೈಸ್ ತಿನ್ನೋದಕ್ಕೆ ಎಷ್ಟು ರುಚಿಯಾಗಿರುತ್ತೋ ಅಷ್ಟೇ ದುಬಾರಿಯಾಗಿದೆ. ಸ್ವಲ್ಪವೇ ಸ್ವಲ್ಪ ಫ್ರೆಂಚ್ ಫ್ರೈಸ್ ಗೆ ದುಬಾರಿ ಬೆಲೆ ಕೊಟ್ಟು ತಿನ್ನುತ್ತೀವಿ.

ಇತ್ತೀಚಿನ ಮಕ್ಕಳಂತೂ ಫ್ರೆಂಚ್ ಫ್ರೈಸ್ ಅಂದ್ರೆ ಜೀವಾನೇ ಬಿಡ್ತಾರೆ. ಕೆಲವೊಂದು ಸಲ ನಾವು ಮನೆಯಲ್ಲಿಯೇ ಫ್ರೆಂಚ್ ಫ್ರೈಸ್ ಮಾಡಿ ತಿನ್ನೋಣ ಅಂದ್ರೂ ಕೂಡ ಅದು ಅಷ್ಟೊಂದು ಪರ್ಫೆಕ್ಟ್ ಆಗಿ ಬರೋದಿಲ್ಲ. ಅಂಗಡಿಯಲ್ಲಿ ತಿಂದ ರುಚಿ ನಮಗೆ ಸಿಗೋದಿಲ್ಲ. ಈ ಟಿಪ್ಸ್ ಗಳನ್ನು ಫಾಲೋ ಮಾಡಿದ್ರೆ ಖಂಡಿತ ನೀವು ಮನೆಯಲ್ಲಿಯೇ ಪರ್ಫೆಕ್ಟ್ ಆಗಿ ಫ್ರೆಂಚ್ ಫ್ರೈಸ್ ಮಾಡಿ ಸವಿಯಬಹುದು. ಅಷ್ಟಕ್ಕು ಹೋಮ್ ಮೇಡ್ ಫ್ರೆಂಚ್ ಫ್ರೈಸ್ ಮಾಡೋದು ಹೇಗೆ ಅನ್ನೋದನ್ನು ತಿಳಿಯೋಣ.

ಫ್ರೆಂಚ್ ಫ್ರೈಸ್ ಹುಟ್ಟಿಕೊಂಡಿದ್ದು ಎಲ್ಲಿ ಗೊತ್ತಾ?
ಮೈಸೂರ್ ಪಾಕ್, ಮೈಸೂರು ಮಲ್ಲಿಗೆ ಹೀಗೆ ಯಾವುದಾರೂ ಒಂದು ಆಹಾರ ಫೇಮಸ್ ಆಗಿದ್ರೆ ಅದರ ಜೊತೆಗೆ ಅದರ ಊರಿನ ಹೆಸರು ಕೂಡ ಸೇರಿಕೊಂಡಿರುತ್ತೆ. ಅದೇ ರೀತಿ ಅನೇಕ ಜನ ಫ್ರೆಂಚ್ ಫ್ರೈಸ್ ಕೂಡ ಫ್ರೆಂಚ್ ನಲ್ಲೇ ಮೊದಲು ತಯಾರು ಮಾಡಲಾಗಿತ್ತೋ ಏನೋ ಅಂತ ಅಂದುಕೊಂಡಿರ್ಬಹುದು. ಆದ್ರೆ ನಿಮ್ಮ ಕಲ್ಪನೆ ತಪ್ಪು. ಫ್ರೆಂಚ್ ಫ್ರೈಸ್ ಮೊದಲಿಗೆ ತಯಾರಾಗಿದ್ದು ಬೆಲ್ಜಿಯಂ ನಲ್ಲಿ. ಫ್ರಾನ್ಸ್ ನಲ್ಲಿ ಅಲ್ಲ. ಈಗ ಮನೆಯಲ್ಲಿಯೇ ಯಾವ ರೀತಿ ಪರ್ಫೆಕ್ಟ್ ಫ್ರೆಂಚ್ ಫ್ರೈಸ್ ಮಾಡ್ಬಹುದು ಅನ್ನೋದನ್ನು ನೋಡೋಣ.

1. ಸರಿಯಾದ ಆಲೂಗಡ್ಡೆಯನ್ನು ಆಯ್ದುಕೊಳ್ಳಿ
ಫ್ರೆಂಚ್ ಫ್ರೈಸ್ ಮಾಡೋದಕ್ಕೆ ಚೆನ್ನಾಗಿರುವ ಆಲೂಗಡ್ಡೆಗಳನ್ನೇ ಆಯ್ದುಕೊಳ್ಳಬೇಕು. ಹೆಚ್ಚುವರಿ ಪಷ್ಠ ಹಾಗೂ ಕಡಿಮೆ ಕಡಿಮೆ ಸಕ್ಕರೆ ಅಂಶ ಹೊಂದಿರುವ ಆಲೂಗಡ್ಡೆಯನ್ನು ಆಯ್ದುಕೊಳ್ಳಿ. ಇಂತಹ ಅಲೂಗಡ್ಡೆಯಿಂದ ಫ್ರೆಂಚ್ ಫ್ರೈಸ್ ಮಾಡಿದ್ರೆ ಅದು ಗರಿಗರಿಯಾಗಿರುತ್ತೆ. ಇನ್ನೂ ದೊಡ್ಡದಾದ ದುಂಡಾಕಾರದ ಆಲೂಗಡ್ಡೆ ಆಯ್ದುಕೊಂಡರೆ ತುಂಬಾನೇ ಒಳ್ಳೆಯದು. ಇದರಿಂದ ಉದ್ದವಾದ ಫ್ರೆಂಚ್ ಫ್ರೈಸ್ ಗಳು ಲಭ್ಯವಾಗುತ್ತದೆ.

2. ಚೆನ್ನಾಗಿ ನೆನೆಯಲು ಬಿಡಿ
ಫ್ರೆಂಚ್ ಫ್ರೈಸ್ ಅನ್ನು ಕನಿಷ್ಠ ಪಕ್ಷ 15 ನಿಮಿಷಗಳ ಕಾಲ ಸಾಮಾನ್ಯ ನೀರಿನಲ್ಲಿ ನೆನೆಸಿಟ್ಟರೆ ಒಳ್ಳೆಯದು. ಆಗ ಅಲೂಗಡ್ಡೆ ಪಿಷ್ಠದ ಅಂಶವನ್ನು ಬಿಡುಗಡೆ ಮಾಡುತ್ತದೆ. ನಂತರ ಹತ್ತು ನಿಮಿಷಗಳ ಕಾಲ ಚೆನ್ನಾಗಿ ತೊಳೆಯಿರಿ. ಆ ಬಳಿಕ ಹತ್ತು ನಿಮಿಷಗಳ ಕಾಲ ಶುದ್ಧ ನೀರಿನಲ್ಲಿ ನೆನೆಸಿಡಿ.

3. ಕುದಿಸಿರಿ
ಆಲೂಗಡ್ಡೆಯನ್ನು ಉದ್ದಕ್ಕೆ ತುಂಡರಿಸಿ 20% ರಷ್ಟು ಕುದಿಯುವ ತಾಪಮಾನದಲ್ಲಿ ಅಂದರೆ 80-85 ಡಿಗ್ರಿ ಸೆಲ್ಸಿಯಸ್ ನಲ್ಲಿ ಕುದಿಸಿ. ನಂತರ ಅದನ್ನು ಒಂದು ಪ್ಲೇಟ್ ನಲ್ಲಿ ಹರಡಿ.

4. ಡೀಪ್ ಫ್ರೀಜ್ ಮಾಡಿ
ಆನಂತರ ಆಲೂಗಡ್ಡೆಯನ್ನು ಒಂದು ಗಂಟೆ ಅಥವಾ ಒಂದುವರೆ ಗಂಟೆಗಳ ಕಾಲ ಡೀಪ್ ಫ್ರೀಜ್ ಮಾಡಿ. ಆಲೂಗಡ್ಡೆಯನ್ನು ಕುದಿಸಿದ ನಂತರ ಡೀಪ್ ಫ್ರೀಜ್ ಮಾಡೊದ್ರಿಂದ ಅವು ಗರಿ ಗರಿಯಾಗುತ್ತದೆ. ಹಾಗೂ ಕಪ್ಪು ಬಣ್ಣಕ್ಕೆ ತಿರುಗೋದಿಲ್ಲ. ಆಲೂಗಡ್ಡೆ ತಾಜಾವಾಗಿರುತ್ತದೆ.

5. ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ
ಆಲೂಗಡ್ಡೆಯನ್ನು ಎಣ್ಣೆಯಲ್ಲಿ ಕರಿಯಲು ಮೊದಲಿಗೆ ಎಣ್ಣೆಯನ್ನು 130 ಡಿಗ್ರಿ ಸೆಲ್ಸಿಯಸ್ ನಲ್ಲಿ ಫ್ರೈ ಮಾಡಿ. ಆಲೂಗಡ್ಡೆಯನ್ನು ಹುಡಿದ ನಂತರ ಅದನ್ನು ಒಂದು ಟವೆಲ್ ಮೇಲೆ ಹಾಕಿ. ನಿಮಗೆ ಫ್ರಂಚ್ ಫ್ರೈಸ್ ಮತ್ತೂ ಗರಿ ಗರಿಯಾಗಬೇಕಂದ್ರೆ ಅವುಗಳನ್ನು 170 ಡಿಗ್ರಿ ಎಣ್ಣೆ ತಾಪಮಾನದಲ್ಲಿ ಮತ್ತೊಮ್ಮೆ ಹುರಿಯಿರಿ.

ಈಗ ಬಿಸಿ ಬಿಸಿಯಾದ, ಗರಿ ಗರಿಯಾದ ಫ್ರೆಂಚ್ ಫ್ರೆಸ್ ಸವಿಯಲು ಸಿದ್ದ. ಅಂಗಡಿಯಲ್ಲಿ ಅಷ್ಟೊಂದು ದುಡ್ಡು ಕೊಟ್ಟು ಫ್ರಂಚ್ ಫ್ರೈಸ್ ತಿನ್ನುವ ಬದಲು ಮನೆಯಲ್ಲಿಯೇ ಶುಚಿ-ರುಚಿಯಾದ ಫ್ರಂಚ್ ಫ್ರೈಸ್ ತಿನ್ನಬಹುದು.



















Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries