ನವದೆಹಲಿ: ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದ್ದು ಅವುಗಳನ್ನು ರಕ್ಷಣೆಗೆ ಕಟಿಬದ್ದರಾಗಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
0
samarasasudhi
ಆಗಸ್ಟ್ 15, 2023
ನವದೆಹಲಿ: ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದ್ದು ಅವುಗಳನ್ನು ರಕ್ಷಣೆಗೆ ಕಟಿಬದ್ದರಾಗಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
ಸ್ವಾತಂತ್ರ್ಯ ದಿನದ ಅಂಗವಾಗಿ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮತನಾಡಿದ ಅವರು, ಸ್ವಾತಂತ್ರ್ಯದ ಹೋರಾಟದ ವೇಳೆ ಮಡಿದವರ ತ್ಯಾಗವನ್ನು ನೆನಪಿಸಿಕೊಂಡರು.
ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಈ ದೇಶದ ಆತ್ಮ. ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಸ್ವಾಯತ್ತ ಸಂಸ್ಥೆಗಳು ಅಪಾಯದಲ್ಲಿದೆ ಎಂದು ಹೇಳಲು ನೋವಾಗುತ್ತಿದೆ. ಸ್ವಾತಂತ್ರ್ಯ ದಿನದ ಈ ಸ್ವಾತಂತ್ರ್ಯ ದಿನದಂದು, ನಾವು ಸಂವಿಧಾನ, ಪ್ರಜಾಪ್ರಭುತ್ವ, ಐಕ್ಯತೆ ಹಾಗೂ ಸಮಗ್ರತೆಯನ್ನು ಎತ್ತಿ ಹಿಡಿಯುವ ಪ್ರತಿಜ್ಞೆ ಮಾಡುತ್ತೇವೆ ಎಂದು ಹೇಳಿದರು.
ಈ ನಿರ್ಣಯದೊಂದಿಗೆ ಮಗದೊಮ್ಮೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರುತ್ತೇನೆ ಎಂದು ಹೇಳಿದ ಅವರು, ವಿಪಕ್ಷ ಒಕ್ಕೂಟದ ಘೋಷವಾಕ್ಯ 'ಭಾರತ್ ಜುಡೇಗಾ, ಇಂಡಿಯಾ ಜೀತೆಗಾ' (ಭಾರತ ಒಂದಾಗಲಿದೆ, ಇಂಡಿಯಾ ಗೆಲ್ಲಲಿದೆ) ಎಂದು ಹೇಳಿದರು.