ಬದಿಯಡ್ಕ: ರಜತ ಸಂಭ್ರಮದ ಸಂಭ್ರಮದಲ್ಲಿರುವ ನೆಕ್ರಾಜೆ ಸನಿಹದ ಮಾವಿನಕಟ್ಟೆಯ ವೀಣಾವಾದನಿ ಸಂಗೀತ ಮಹಾವಿದ್ಯಾಲಯ "ನಾರಾಯಣೀಯಂ" ಕಟ್ಟಡ ಸಮುಚ್ಛಯ ವಿಸ್ತಾರಗೊಳ್ಳುತ್ತಿದ್ದು, ಕೇರಳದ ವಾಸ್ತು ಶಾಸ್ತ್ರದ ಶೈಲಿಯಲ್ಲಿ ತ್ರಿಸೂತ್ರ ಮಾದರಿಯ "ತ್ರಿಶಾಲ" ಎಂಬ ಮೂರು ಮುಖದ ವಿಸ್ತಾರವಾದ ಕಲಾಶಾಲೆಯಾಗಿ ತಲೆಯೆತ್ತಲಿದೆ. ಸುಮಾರು 25ಲಕ್ಷ ರೂ. ವೆಚ್ಚದಲ್ಲಿ ಕಲಾಶಾಲೆ ನಿರ್ಮಾಣಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಮತ್ತು ದಿ. ಬಾಲಮುರಳೀಕೃಷ್ಣ ಅವರ ಸಲಹೆಯಂತೆ "ಬಾಲರಾಮವರಂ" ಎಂಬ ಹೆಸರಲ್ಲಿ ತಲೆಯೆತ್ತಲಿರುವ ಕಟ್ಟಡ ನಿರ್ಮಾಣ ಯೋಜನೆಯ ಕುರಿತು ಸಂಘಟನಾ ಸಭೆ ವೀಣಾವಾದಿನಿಯಲ್ಲಿ ನಡೆಯಿತು.
ಯೋಜನೆಯ ಅನುಷ್ಠಾನಕ್ಕೆ ಸಮಿತಿ ರಚನಾ ಸಭೆ ನಾರಾಯಣೀಯಂನಲ್ಲಿ ಜರುಗಿತು. ಸಭೆಯಲ್ಲಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು ಅಧ್ಯಕ್ಷತೆ ವಹಿಸಿದರು. ದುಬೈ ರಾಜತಾಂತ್ರಿಕ ವಿಭಾಗದ ಭಾರತೀಯ ಅಧಿಕಾರಿ ಸುರೇಶ್ ಪ್ರಸಾದ್, ಪೆರ್ಲದ ರಮಣಿ ಟೀಚರ್, ಬೆಂಗಳೂರಿನ ಸೂರ್ಯನಾರಾಯಣ ಭಟ್, ಬಳ್ಳಪದವು ಯೋಗೀಶ್ ಶರ್ಮ, ಕಣಿಪುರ ಪತ್ರಿಕೆ ಸಂಪಾದಕ ಎಂ. ನಾ. ಚಂಬಲ್ತಿಮಾರ್, ಇಂನಿಯರ್ ಎಂ. ಎನ್ ಭಟ್, ಹಾಗೂ ಅಜಿತ್ ಓಟೆಕ್ಕಾಡು, ಪ್ರವೀಣ್, ಚಂದ್ರಶೇಖರ ಮಾಸ್ತರ್, ಸೌಮ್ಯ ಮಧೂರು ಉಪಸ್ಥಿತರಿದ್ದರು.





