ವಾಷಿಂಗ್ಟನ್: 'ಮಾನವ ಹಕ್ಕುಗಳ ವಿಷಯದಲ್ಲಿ ಅಮೆರಿಕವು ಭಾರತದ ಜೊತೆ ಈ ಹಿಂದೆಯೂ ನಿರಂತರವಾಗಿ ಕೈಜೋಡಿಸಿದೆ, ಭವಿಷ್ಯದಲ್ಲೂ ತನ್ನ ಕಾಳಜಿಯನ್ನು ಮುಂದುವರೆಸಲಿದೆ' ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
0
samarasasudhi
ಆಗಸ್ಟ್ 09, 2023
ವಾಷಿಂಗ್ಟನ್: 'ಮಾನವ ಹಕ್ಕುಗಳ ವಿಷಯದಲ್ಲಿ ಅಮೆರಿಕವು ಭಾರತದ ಜೊತೆ ಈ ಹಿಂದೆಯೂ ನಿರಂತರವಾಗಿ ಕೈಜೋಡಿಸಿದೆ, ಭವಿಷ್ಯದಲ್ಲೂ ತನ್ನ ಕಾಳಜಿಯನ್ನು ಮುಂದುವರೆಸಲಿದೆ' ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಭಾರತದಲ್ಲಿ ಕ್ರೈಸ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವಿದೆ.
'ನಾವು ಎಲ್ಲ ದೇಶಗಳೊಟ್ಟಿಗೆ ಮಾನವ ಹಕ್ಕುಗಳ ಬಗ್ಗೆ ನಮ್ಮ ಕಾಳಜಿ ವ್ಯಕ್ತಪಡಿಸುತ್ತೇವೆ. ಕ್ರೈಸ್ತರಿಗಷ್ಟೇ ಅಲ್ಲ, ಪ್ರತಿಯೊಂದು ಧರ್ಮದವರ ಶೋಷಣೆ, ಕಿರುಕುಳದ ಬಗ್ಗೆಯೂ ಕೇಳುತ್ತೇವೆ' ಎಂದಿದ್ದಾರೆ.
'ಇಂತಹ ಆರೋಪ ತಪ್ಪು ಮಾಹಿತಿ ಹಾಗೂ ದೋಷಪೂರಿತ ತಿಳಿವಳಿಕೆಯದ್ದು' ಎಂದು ಭಾರತ ಈ ಹಿಂದೆ ಹಲವು ಬಾರಿ ಪ್ರತಿಕ್ರಿಯಿಸಿದೆ.
ಈ ವರದಿಯ ಕುರಿತಂತೆ ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ 'ನಾವು ಅಮೆರಿಕದ ಜೊತೆಗಿನ ಮೌಲ್ಯಯುತ ಪಾಲುದಾರಿಕೆಯನ್ನು ಮುಂದುವರೆಸುತ್ತೇವೆ. ಕಾಳಜಿಯ ವಿಷಯದಲ್ಲಿ ಸ್ಪಷ್ಟ ವಿನಿಮಯವನ್ನು ಮುಂದುವರಿಸುತ್ತೇವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದಾರೆ.