ಪೆರ್ಲ: ಸರ್ಕಾರದ ನಿಬಂಧನೆ ಪಾಲಿಸದೆ ಪರಿಸರಕ್ಕೆ ಹಾಗೂ ಜನವಾಸಕ್ಕೆ ಮಾರಕವಾಗಿ ಕಾಟುಕುಕ್ಕೆಯ ಬಾಳೆಮೂಲೆ ಸಮೀಪ ಅನಂತ್ತೊಟ್ಟಿ ಎಂಬಲ್ಲಿ ಅನಧಿಕೃತವಾಗಿ ಕಾರ್ಯಚರಿಸುವ ಮೇಘ ಕೈಗಾರಿಕಾ ಸಂಸ್ಥೆಗೆದುರಾಗಿ ಸಿಪಿಐಎಂ ಕಾಟುಕುಕ್ಕೆ ಲೋಕಲ್ ಸಮಿತಿ ಹಾಗೂ ನಾಗರಿಕ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಸೋಮವಾರ ಬೆಳಗ್ಗಿನಿಂದ ಆರಂಭಗೊಂಡಿದೆ.
ಸಿಪಿಐಎಂ ಕುಂಬಳೆ ಏರಿಯಾ ಸಮಿತಿ ಕಾರ್ಯದರ್ಶಿ ಸಿ.ಎ.ಸುಬೈರ್ ಉದ್ಘಾಟಿಸಿ ಮಾತನಾಡಿ, ಜೀವ ವಾಯು, ಜಲ, ಹಸಿರು ಪರಿಸರ ನಾಶಪಡಿಸಿಕೊಂಡು ನಿಬಂಧನೆ ರಹಿತವಾಗಿ ಕಾರ್ಯಚರಿಸುವ ಈ ಅನಧಿಕೃತ ಕಾರ್ಖಾನೆಯನ್ನು ಮುಚ್ಚಿಸಿ ನಾಡಿನ ಜನತೆಗೆ ಸ್ವಾಸ್ಥ್ಯ ಪರಿಸರ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಅನಿರ್ಧಿμÁ್ಟವಧಿ ಹೋರಾಟಕ್ಕೆ ಪಕ್ಷ ಹಾಗೂ ನಾಗರಿಕರು ಕೈಜೋಡಿಸಿದ್ದು ಎಂಡೋಸಲ್ಫನ್ ದುರಂತ ಸಂಭವಿಸಿದ ಎಣ್ಮಕಜೆಯ ಮಣ್ಣಿನಲ್ಲಿ ಮತ್ತೊಂದು ದುರಂತ ಮರುಕಳಿಸಲು ಬಿಡಬಾರದೆಂದು ಎಚ್ಚರಿಸಿದರು.
ಸ್ಥಳೀಯ ವಾರ್ಡ್ ಸದಸ್ಯರು, ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ಶಶಿಧರ ಅಧ್ಯಕ್ಷತೆವಹಿಸಿದ್ದರು. ಸಿಪಿಐಎಂ ಕುಂಬಳೆ ಏರಿಯ ಸಮಿತಿ ಸದಸ್ಯ ಮಂಜುನಾಥ ಪಿ.ಕೆ, ಲೋಕಲ್ ಸಮಿತಿ ಸದಸ್ಯರಾದ ಸುಧಾಕರ ಮಾಸ್ತರ್ ಕಾಟುಕುಕ್ಕೆ, ನಾಗರಿಕ ಕ್ರಿಯಾ ಸಮಿತಿ ಸಂಚಾಲಕ ಉಮೇಶ್, ಲೋಕಲ್ ಸಮಿತಿ ಸದಸ್ಯೆ ಸುಶೀಲಾ ವಿ.ಕೆ, ವಿಠಲ ಸಾಲಿಯಾನ್ ಸಭೆಯಲ್ಲಿ ಉಪಸ್ಥಿತರಿದ್ದರು. ಸಿಪಿಐಎಂ ಕಾಟುಕುಕ್ಕೆ ಲೋಕಲ್ ಸಮಿತಿ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಸ್ವಾಗತಿಸಿ ವಿಜಯ ಕುಮಾರ್ ಬಿ ವಂದಿಸಿದರು.

.jpg)
.jpg)
