HEALTH TIPS

ವಯನಾಡಿನಲ್ಲಿ ರಾಹುಲ್‌ ಗಾಂಧಿಗೆ ಅದ್ದೂರಿ ಸ್ವಾಗತ

               ಯನಾಡ್ (PTI): ಲೋಕಸಭಾ ಸದಸ್ಯತ್ವ ಮರುಸ್ಥಾಪನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿದ ರಾಹುಲ್‌ ಗಾಂಧಿ ಅವರಿಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.

               ಸಂಜೆ 5.30ಕ್ಕೆ ವಯನಾಡ್‌ ತಲುಪಿದ ರಾಹುಲ್‌ ಅವರನ್ನು ಜಯಘೋಷಗಳೊಂದಿಗೆ ಯುಡಿಎಫ್‌ ನಾಯಕರು ಸಂಭ್ರಮದಿಂದ ಬರಮಾಡಿಕೊಂಡರು.

                ಕಲ್‌ಪೆಟ್ಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಮಣಿಪುರದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.

              'ಅವರು (ಮೋದಿ) 2 ಗಂಟೆ 13 ನಿಮಿಷಗಳ ಕಾಲ ಸಂಸತ್‌ನಲ್ಲಿ ಮಾತನಾಡಿದರು. ನಕ್ಕರು, ನಗೆ ಚಟಾಕಿ ಹಾರಿಸಿದರು, ಅವರ ಮಂತ್ರಿಗಳು ನಕ್ಕರು, ಹಾಸ್ಯ ಮಾಡಿದರು, ಎಲ್ಲರೂ ಬಹಳ ಸಂತೋಷದಿಂದಿದ್ದರು. ಎಲ್ಲದರ ಬಗ್ಗೆ ಎರಡು ಗಂಟೆ ಮಾತನಾಡಿದರು. ಕಾಂಗ್ರೆಸ್‌ ಬಗ್ಗೆ, 'ಇಂಡಿಯಾ' ಮೈತ್ರಿ ಕೂಟದ ಬಗ್ಗೆ ಚರ್ಚೆ ಮಾಡಿದರು. ಆದರೆ, ಮಣಿಪುರದ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದು ಕೇವಲ ಎರಡು ನಿಮಿಷ ಮಾತ್ರ' ಎಂದು ವಾಗ್ದಾಳಿ ನಡೆಸಿದರು.

                                         ತೋಡಾ ಸಮುದಾಯದೊಂದಿಗೆ ಒಡನಾಟ

                : ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ತೆರತ್ತಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮಾರ್ಗ ಮಧ್ಯೆ ತಮಿಳುನಾಡಿನ ನೀಲಗಿರಿಯಲ್ಲಿ ತೋಡಾ ಸಮುದಾಯದವರೊಂದಿಗೆ ಸಮಯ ಕಳೆದರು.

               ಮುತ್ತುನಾಡುಮಂಡು ಎಂಬಲ್ಲಿ ಬುಡಕಟ್ಟು ಜನರ ಜತೆ ಸಂವಾದ ನಡೆಸಿದ ಅವರು, ಸಾಂಪ್ರದಾಯಿಕ ನೃತ್ಯದಲ್ಲಿ ಹೆಜ್ಜೆ ಹಾಕಿದರು. ನಂತರ ಅವರ ಆರಾಧ್ಯ ದೈವದ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

                     ಮುಂದಿನ ಬಾರಿ ಪ್ರಧಾನಿಯಾಗಿ ಇಲ್ಲಿಗೆ ಬರುವಂತೆ ತೋಡಾ ಸಮುದಾಯದ ಮಹಿಳೆಯರು ರಾಹುಲ್‌ರನ್ನು ಆಶೀರ್ವದಿಸಿದರು.

                      ರಾಹುಲ್‌ಗೆ ಸಾಂಪ್ರದಾಯಿಕ ಶಾಲನ್ನು ಉಡುಗೊರೆಯಾಗಿ ನೀಡಲಾಯಿತು. ತೋಡಾ ಸಮುದಾಯದ ಜನ ನೀಡಿದ ಆಹಾರವನ್ನು ರಾಹುಲ್‌ ಸವಿದರು. ಸಾಂಪ್ರದಾಯಿಕ ಕ್ರೀಡೆಯಾದ 'ಇಳವಟ್ಟಕ್ಕಲ್'ಗೆ ಅವರು ಸಾಕ್ಷಿಯಾದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries