ತಿರುವನಂತಪುರಂ: ಸಂಚಾರಿ ನಿಯಮ ಉಲ್ಲಂಘಿಸುವ ಪೋಲೀಸ್ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಬಲವಾಗಿದೆ. ಎಐ ಕ್ಯಾಮೆರಾದಲ್ಲಿ ಸಿಲುಕುವ ಪೋಲೀಸ್ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ನಿರಂತರವಾಗಿ ಕಾನೂನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಜಿಲ್ಲಾ ಪೋಲೀಸ್ ವರಿμÁ್ಠಧಿಕಾರಿಗಳಿಗೆ ಡಿಜಿಪಿ ಸೂಚಿಸಿದರು.
ಪೋಲೀಸರು ಸೀಟ್ ಬೆಲ್ಟ್ ಹಾಕದೆ ವಾಹನ ಚಲಾಯಿಸುವುದು ಸೇರಿದಂತೆ ಹಲವು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕ್ಯಾಮರಾ ಕಣ್ಣಿಗೆ ಬಿದ್ದಿವೆ. ಇದರಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ವಾಹನಗಳೂ ಸೇರಿವೆ ಎಂದು ವರದಿಯಾಗಿದೆ. ಪೋಲೀಸ್ ವಾಹನಗಳು ರಾಜ್ಯ ಪೋಲೀಸರ ಒಡೆತನದಲ್ಲಿದೆ. ಕಾನೂನು ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಡಿಜಿಪಿ ಸೂಚಿಸಿದರು.
ಕ್ಯಾಮೆರಾ ದಂಡವನ್ನು ಪುನರಾವರ್ತಿಸುವ ಪೋಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಆಲೋಚನೆ ಇದೆ. ತುರ್ತು ಸಂದರ್ಭಗಳಲ್ಲಿ ಎಐ ಕ್ಯಾಮೆರಾಗಳು ಪೋಲೀಸರಿಗೆ ಅನ್ವಯಿಸುವುದಿಲ್ಲ, ಇತರ ಸಮಯಗಳಲ್ಲಿ ಕಾನೂನನ್ನು ಅನುಸರಿಸಬೇಕು. ಪೋಲೀಸ್ ಅಧಿಕಾರಿಗಳೇ ಇಂತಹ ತಪ್ಪುಗಳನ್ನು ಪುನರಾವರ್ತಿಸುವುದರಿಂದ ಸಾರ್ವಜನಿಕರಲ್ಲಿ ಪೋಲೀಸರ ಬಗ್ಗೆ ತಿರಸ್ಕಾರ ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಘಟಕದ ಮುಖ್ಯಸ್ಥರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.


