ಪಾಲಕ್ಕಾಡ್:ಒಂದೂವರೆ ವರ್ಷದ ಹಿಂದೆ ಮೃತಪಟ್ಟಿರುವ ವ್ಯಕ್ತಿಯ ಹೆಸರಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಅಡಿಯಲ್ಲಿ ಸಂಚಾರಿ ಪೊಲೀಸರು ನೋಟಿಸ್ ನೀಡಿರುವ ಘಟನೆ ಪಾಲಕ್ಕಾಡ್ ನಲ್ಲಿ ನಡೆದಿದೆ.
0
samarasasudhi
ಆಗಸ್ಟ್ 07, 2023
ಪಾಲಕ್ಕಾಡ್:ಒಂದೂವರೆ ವರ್ಷದ ಹಿಂದೆ ಮೃತಪಟ್ಟಿರುವ ವ್ಯಕ್ತಿಯ ಹೆಸರಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಅಡಿಯಲ್ಲಿ ಸಂಚಾರಿ ಪೊಲೀಸರು ನೋಟಿಸ್ ನೀಡಿರುವ ಘಟನೆ ಪಾಲಕ್ಕಾಡ್ ನಲ್ಲಿ ನಡೆದಿದೆ.
ನೋಟಿಸ್ ಅನ್ನು ಪಲಕ್ಕಾಡ್ನಲ್ಲಿರುವ ವಿನೋದ್ ಎಂಬುವರ ಮನೆಗೆ ಕಳುಹಿಸಲಾಗಿದೆ.
ವಿನೋದ್ ಅವರ ತಂದೆಯ ಹೆಸರು ಚಂದ್ರಶೇಖರನ್. ಪಲಕ್ಕಾಡ್ನ ಕಲವಪಡ ಮೂಲದವರು. 89ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು, ಒಂದೂವರೆ ವರ್ಷ ಕಳೆದಿದೆ. ಆಲ್ಝೈಮರ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಚಂದ್ರಶೇಖರನ್ ಸಾವಿಗೂ ಮುನ್ನ 7 ತಿಂಗಳ ಕಾಲ ಹಾಸಿಗೆ ಹಿಡಿದಿದ್ದರು. ಅಂದಿನಿಂದ ಪಂಕ್ಚರ್ ಹಾಕಿಸಲು ಸಹ ಸ್ಕೂಟರ್ ಹೊರಗೆ ತೆಗೆದುಕೊಂಡು ಹೋಗಿಲ್ಲ ಎಂದು ವಿನೋದ್ ಹೇಳಿದ್ದಾರೆ.
ನೋಟಿಸ್ ಬಂದಿದ್ದನ್ನು ನೋಡಿ ನಮಗೇ ಶಾಕ್ ಆಗಿದೆ. ಯಾರೂ ಕೂಡ ನನ್ನ ತಂದೆಯ ಸ್ಕೂಟರ್ ಅನ್ನು ಮುಟ್ಟಿಲ್ಲ. ಕಳೆದ ಒಂದೂವರೆ ವರ್ಷದಿಂದ ಸ್ಕೂಟರ್ ಅನ್ನು ಹೊರಗಡೆ ತೆಗೆದುಕೊಂಡು ಹೋಗಿಲ್ಲ. ಈಗ ನೋಡಿದರೆ ನೋಟಿಸ್ ಬಂದಿದೆ. ನಾನು ಯಾವುದೇ ಕಾರಣಕ್ಕೂ ದಂಡ ಕಟ್ಟುವುದಿಲ್ಲ. ಬೇಕಾದ್ರೆ ಈಗ ಅವರು ನನ್ನ ತಂದೆಯನ್ನು ಬಂಧಿಸಲಿ, ಅದನ್ನು ಬಿಟ್ಟು ಇನ್ನೇನು ಮಾಡಲು ಸಾಧ್ಯ ಎಂದು ವಿನೋದ್ ಹೇಳಿದ್ದಾರೆ.