ತ್ರಿಶೂರ್: ಗುರುವಾಯೂರಿನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಗೋಶಾಲೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ದೇವಸ್ವಂ ಅಧ್ಯಕ್ಷ ಡಾ. ವಿ.ಕೆ ವಿಜಯನ್ ಶಂಕುಸ್ಥಾಪನೆ ನಡೆಸಿಕೊಟ್ಟರು. ಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಗೋಶಾಲೆ ನಿರ್ಮಾಣವಾಗುತ್ತಿದೆ.
11,000 ಚದರ ಅಡಿ ವಿಸ್ತೀರ್ಣದಲ್ಲಿ ಮೂರು ಮಹಡಿಗಳಲ್ಲಿ ಗೋಶಾಲೆ ನಿರ್ಮಿಸಲಾಗುತ್ತಿದೆ. ಕಟ್ಟಡದಲ್ಲಿ ಕರುಗಳನ್ನು ಸಾಕಲು ಪ್ರತ್ಯೇಕ ಜಾಗವಿರುತ್ತದೆ. ಜತೆಗೆ ಗೋಶಾಲಾ ಕಟ್ಟಡದಲ್ಲಿ ಮೇವು ಸಂಗ್ರಹಿಸಲು ವಿಶೇಷ ಕೊಠಡಿ, ಹಾಲು, ಮೊಸರು ಬೆಣ್ಣೆ ಸಂಗ್ರಹಿಸಲು ಕೊಠಡಿ, ಔಷಧ ಕೊಠಡಿ ಇರಲಿದೆ.
ನಗರಸಭೆ ಅಧ್ಯಕ್ಷ ಎಂ.ಕಷ್ಣದಾಸ್, ದೇವಸ್ಥಾನದ ತಂತ್ರಿ ದಿನೇಶನ್ ನಂಬೂದಿರಿಪಾಡ್, ಆಡಳಿತ ಮಂಡಳಿ ಸದಸ್ಯರು, ಮುಖ್ಯ ಎಂಜಿನಿಯರ್ ಎಂ.ವಿ.ರಾಜನ್, ಕಾರ್ಯಪಾಲಕ ಎಂಜಿನಿಯರ್ ಎಂ.ಕೆ.ಅಶೋಕ್ ಕುಮಾರ್, ಎಂಜಿನಿಯರ್ ಗಳಾದ ವಿ.ಬಿ.ಸಾಬು, ನಾರಾಯಣನ್ ಉಣ್ಣಿ ಅವರ ಸಕ್ರಿಯ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.


