ಬದಿಯಡ್ಕ: ಅರುಣೋದಯ ಫ್ರೆಂಡ್ಸ್ ಕ್ಲಬ್ ಚುಕ್ಕಿನಡ್ಕ ಇದರ ಆಶ್ರಯದಲ್ಲಿ 76ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕ್ಲಬ್ಬಿನ ಅಧ್ಯಕ್ಷ ಆನಂದ .ಸಿ.ಯಚ್ ಅವರ ಅಧ್ಯಕ್ಷತೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ ಶ್ಯಾಮ ಪ್ರಸಾದ್ ಮಾನ್ಯ ಧ್ವಜಾರೋಹಣಗೈದು ಮಾತನಾಡಿದರು. ಸಮಾಜ ಸೇವಕ ರಾಮ ಪಟ್ಟಾಜೆ ಅಥಿತಿಯಾಗಿದ್ದರು. ಸ್ಪೆಷ್ಯಲ್ ಬ್ರಾಂಚ್ ಪೋಲೀಸ್ ಇಲಾಖೆಯ ಅನೂಪ್ ಚುಕ್ಕಿನಡ್ಕ, ರೈಲ್ವೇ ಇಲಾಖೆಯ ಶಿವನಾಯ್ಕ್ ಚುಕ್ಕಿನಡ್ಕ, ಲೋಹಿತಾಕ್ಷನ್ ಪಟ್ಟಾಜೆ ಶುಭಾಶಂಸನೆಗೈದರು. ಗೌರವಾಧ್ಯಕ್ಷ ವಿಜಯನ್ .ಟಿ , ಚಂದ್ರಶೇಖರ ಚುಕ್ಕಿನಡ್ಕ , ಕೃಷ್ಣ ನಾಯ್ಕ್ .ಸಿ.ಯಚ್ ಉಪಸ್ಥಿತರಿದ್ದರು. ಕ್ಲಬ್ಬಿನ ಕಾರ್ಯದರ್ಶಿ ಬಾಲಕೃಷ್ಣ ಚುಕ್ಕಿನಡ್ಕ ಸ್ವಾಗತಿಸಿ, ಸದಸ್ಯ ಶಂಕರ ಮಾಡತ್ತಡ್ಕ ವಂದಿಸಿದರು. ಕುಮಾರಿ ಸುಶ್ಮಿತಾ, ಕುಮಾರಿ ಅರ್ಚನಾ, ಕುಮಾರಿ ಅಂಜಲಿ ಪ್ರಾರ್ಥನೆ ಹಾಡಿದರು.




.jpg)
.jpg)
