ಮುಳ್ಳೇರಿಯ: ಮಲಯಾಳಂ ಭಾಷೆಯ ಪಿತಾಮಹ ತುಂಜತ್ ರಾಮಾನುಜನ್ ಎಝುಚ್ಚನ್ ಅವರ ಪೂರ್ಣ ದೇಹ ಶಿಲ್ಪವನ್ನು ಸಿದ್ಧಪಡಿಸಲಾಗುತ್ತಿದೆ.ಇದು ಮೂರು ಅಡಿ ಎತ್ತರ ಮತ್ತು ಫೈಬರ್ನಲ್ಲಿ ಕಂಚಿನ ಬಣ್ಣದಲ್ಲಿ ಸಿದ್ಧಪಡಿಸಲಾಗುತ್ತಿದೆ. ಕಿಲಿಪಟ್ ಚಳುವಳಿಯ ಜನಕನಾದ ಎಝುಚ್ಚನ ಮುಂದೆ ಗಿಳಿಯ ರೂಪವೂ, ಕೈಯಲ್ಲಿ ತಾಳೆಗರಿ ಪುಸ್ತಕ ಹಾಗೂ ಲೇಖನಿಯನ್ನೂ ನಿರ್ಮಿಸಲಾಗಿದೆ. ಶಿಲ್ಪವನ್ನು ನಿರ್ಮಿಸಲು ಸುಮಾರು ಎರಡು ತಿಂಗಳು ಬೇಕಾಗಿ ಬಂದಿದೆ. ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಅಮೃತ ಮಹೋತ್ಸವದ ಪ್ರಯುಕ್ತ ಈ ಶಿಲ್ಪವನ್ನು ಸ್ಥಾಪಿಸಲಾಗುವುದು. ಭಾರತ ಮತ್ತು ವಿದೇಶಗಳಲ್ಲಿ ಹಲವು ಶಿಲ್ಪಗಳನ್ನು ರಚಿಸಿರುವ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಖ್ಯಾತ ಚಿತ್ರಕಲಾ ಶಿಕ್ಷಕ ಚಿತ್ರನ್ ಕುಂಞÂ ಮಂಗಲಂ ಅವರು ಈ ಶಿಲ್ಪವನ್ನು ತಯಾರಿಸುತ್ತಿದ್ದಾರೆ.
ಶಿಲ್ಪಕಲೆಯಲ್ಲಿ ಅನೇಕ ಪ್ರಶಸ್ತಿಗಳನ್ನು ಚಿತ್ರನ್ ಪಡೆದಿದ್ದಾರೆ. ಶಾಲಾ ವ್ಯವಸ್ಥಾಪಕ ಕೆ.ವೇಣುಗೋಪಾಲನ್ ನಂಬಿಯಾರ್ ಅಧ್ಯಕ್ಷತೆಯ ಪ್ಲಾಟಿನಂ ಜುಬಿಲಿ ಸಮಿತಿಯು ಶಿಲ್ಪ ನಿರ್ಮಾಣಕ್ಕೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಚಿತ್ರಾ ಕೆ, ಅಶ್ವಿನ್, ಸ್ವರಾಜ್ ಮತ್ತು ವಿಷ್ಣು ಸಹಾಯಕರಾಗಿದ್ದರು.




.jpg)
