ತಿರುವನಂತಪುರಂ: ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ನಿರ್ದೇಶಕರ ಮಂಡಳಿಯಿಂದ ನಟಿ ಪಾರ್ವತಿ ತಿರುವೋತ್ ಅವರನ್ನು ವಜಾಗೊಳಿಸಲಾಗಿದೆ. ಈ ಕುರಿತು ಸರಕಾರ ಆದೇಶ ಹೊರಡಿಸಿದೆ.
ಪಾರ್ವತಿ ಅವರನ್ನು ಆ ಸ್ಥಾನದಿಂದ ವಜಾಗೊಳಿಸುವಂತೆ ಚಲನಚಿತ್ರ ಅಭಿವೃದ್ಧಿ ನಿಗಮದ ಎಂಡಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಸರ್ಕಾರ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ. ಮಂಡಳಿಯ ಸದಸ್ಯರಾಗಿದ್ದ ನಟಿ ಮಾಲಾ ಪಾರ್ವತಿ ಮತ್ತು ಶಂಕರ್ ಮೋಹನ್ ಅವರನ್ನು ಕಳೆದ ತಿಂಗಳು ಮಂಡಳಿಯಿಂದ ತೆಗೆದುಹಾಕಲಾಗಿತ್ತು.





