ತಿರುವನಂತಪುರಂ: ರಾಜ್ಯದ ಆರು ಜಿಲ್ಲೆಗಳು ಭೀಕರ ಬರ ಎದುರಿಸುತ್ತಿವೆ. ಕಳೆದ ಮೂರು ತಿಂಗಳ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಶೇ.48ರಷ್ಟು ಕಡಿಮೆ ಮಳೆಯಾಗಿದೆ.
ಹವಾಮಾನ ಇಲಾಖೆಯ ವರದಿಗಳ ಪ್ರಕಾರ, ಆಗಸ್ಟ್‍ನಲ್ಲಿ ಕಳೆದ 100 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ. ಈ ವರ್ಷ ಆಗಸ್ಟ್ ತಿಂಗ¼ಲ್ಲಿÀ ವಾಡಿಕೆಗಿಂತ ಶೇ.30ರಿಂದ 33ರಷ್ಟು ಕಡಿಮೆ ಮಳೆಯಾಗಿದೆ. 2005ರಲ್ಲಿ ಆಗಸ್ಟ್ ತಿಂಗಳಿನಲ್ಲಿ ಮಳೆ ಕಡಿಮೆಯಾಗಿತ್ತು.
ರಾಜ್ಯದಲ್ಲಿ ಮಳೆ ಕಡಿಮೆಯಾಗಲು ಎಲ್ ನಿನೋ ವಿದ್ಯಮಾನವೇ ಕಾರಣ ಎಂದು ಅಂದಾಜಿಸಲಾಗಿದೆ. ಮಳೆಯ ಅಂಕಿಅಂಶಗಳು ರಾಜ್ಯವು ತೀವ್ರ ಶಾಖ ಮತ್ತು ಬರದತ್ತ ಸಾಗುತ್ತಿರುವಾಗ ಆತಂಕಕ್ಕೆ ಕಾರಣವಾಗಿದೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ. ಕೇರಳದಲ್ಲಿ ಮಾನ್ಸೂನ್ ಸಮಯ ಸೆಪ್ಟೆಂಬರ್ ಮೂರನೇ ವಾರದವರೆಗೆ ಮಾತ್ರ. ಈ ಮೂರು ವಾರದಲ್ಲಿ ಸಾಕಷ್ಟು ಮಳೆಯಾದರೆ ಈಗಿನ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ. ಈ ತಿಂಗಳು ಶೇ.94ರಿಂದ 96ರಷ್ಟು ಮಳೆಯಾಗುವ ನಿರೀಕ್ಷೆ ಇದೆ.
ಪ್ರಸ್ತುತ, ಪತ್ತನಂತಿಟ್ಟವು ಆಗಸ್ಟ್ ತಿಂಗಳ ಒಟ್ಟು ಮಳೆಯ ಶೇಕಡಾ ಆರು ಮಾತ್ರ ಪಡೆದಿದೆ. ಪಾಲಕ್ಕಾಡ್‍ನಲ್ಲಿ 7 ಶೇ. ಮತ್ತು ಮಲಪ್ಪುರಂ ತ್ರಿಶೂರ್‍ನಲ್ಲಿ 10 ಶೇ. ಮಳೆಯಾಗಿದೆ. ಪಾಲಕ್ಕಾಡ್ ಸೇರಿದಂತೆ ಜಿಲ್ಲೆಗಳಲ್ಲಿ ಭೀಕರ ಬರಗಾಲ ಎದುರಾಗಲಿದೆ. ಕಾಸರಗೋಡು ಜಿಲ್ಲೆಯೂ ಬರ ಎದುರಿಸುವ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು ಜಿಲ್ಲೆಯಲ್ಲಿ ತಾಪಮಾನ 36 ಡಿಗ್ರಿಗೆ ಏರಿಕೆಯಾಗಿದೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಕೃಷಿ ಕ್ಷೇತ್ರಗಳಲ್ಲೂ ಬರದ ಛಾಯೆ ಆವರಿಸಿದೆ. ಇದರೊಂದಿಗೆ ಗಡಿ ಗ್ರಾಮಗಳ ರೈತರೂ ಕಂಗಾಲಾಗಿದ್ದಾರೆ.





