ನವದೆಹಲಿ : ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು (ಸಿಎಸ್‌ಐಆರ್) 2022ನೇ ಸಾಲಿನ 'ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ'ಯನ್ನು ಸೋಮವಾರ ಪ್ರಕಟಿಸಿದೆ. 12 ಮಂದಿ ಯುವ ವಿಜ್ಞಾನಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ₹ 5 ಲಕ್ಷ ನಗದು, ಫಲಕ ಒಳಗೊಂಡಿದೆ.
ನವದೆಹಲಿ : ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು (ಸಿಎಸ್‌ಐಆರ್) 2022ನೇ ಸಾಲಿನ 'ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ'ಯನ್ನು ಸೋಮವಾರ ಪ್ರಕಟಿಸಿದೆ. 12 ಮಂದಿ ಯುವ ವಿಜ್ಞಾನಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ₹ 5 ಲಕ್ಷ ನಗದು, ಫಲಕ ಒಳಗೊಂಡಿದೆ.
ಸಿಎಸ್‌ಐಆರ್‌ನ ಪ್ರಥಮ ಪ್ರಧಾನ ನಿರ್ದೇಶಕರ ಹೆಸರಿನಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸಾಮಾನ್ಯವಾಗಿ ಸಂಸ್ಥೆಯ ಸ್ಥಾಪನಾ ದಿನ ಸೆ.26ರಂದು ಪ್ರಶಸ್ತಿ ವಿವರಗಳನ್ನು ಪ್ರಕಟಿಸಲಾಗುತ್ತಿತ್ತು. ಪುರಸ್ಕೃತರ ವಿವರ:
* ಕೋಲ್ಕತ್ತದ ರಾಸಾಯನಿಕ ಜೀವವಿಜ್ಞಾನ ಸಂಸ್ಥೆಯ ಪ್ರತಿರಕ್ಷಾ ಶಾಸ್ತ್ರಜ್ಞ ದಿಪ್ಯಮನ್ ಗಂಗೂಲಿ.
* ಪುಣೆ ಮೂಲದ ಅಂತರ ವಿಶ್ವವಿದ್ಯಾಲಯ ಖಭೌತ ವಿಜ್ಞಾನ ಕೇಂದ್ರದ ಕನಕ್ ಸಹಾ.
* ಬೆಂಗಳೂರು ಮೂಲದ ಜವಾಹರ್‌ಲಾಲ್ ನೆಹರೂ ಅಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಕನಿಷ್ಕಾ ಬಿಸ್ವಾಸ್.
* ಭಾರತೀಯ ವಿಜ್ಞಾನ ಸಂಸ್ಥೆಯ ಸೂಕ್ಷ್ಮಜೀವವಿಜ್ಞಾನ, ಕಣ ಜೀವವಿಜ್ಞಾನ ಇಲಾಖೆಯ ಅಮಿತ್ ಸಿಂಗ್.
* ಐಐಟಿ-ಕಾನ್ಪುರದ ಜೈವಿಕ ವಿಜ್ಞಾನ ಮತ್ತು ಜೈವಿಕ ಎಂಜಿನಿಯರಿಂಗ್ ವಿಭಾಗದ ಅರುಣ್ ಕುಮಾರ್ ಶುಕ್ಲಾ.
* ಜವಹರ್‌ಲಾಲ್ ನೆಹರು ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಜೈವಿಕ ಸಾವಯವ ರಾಸಾಯನಿಕ ಪ್ರಯೋಗಾಲಯದ ಟಿ.ಗೋವಿಂದರಾಜ್.
* ಜೋರ‍್ಹಟ್‌ನ ಸಿಎಸ್‌ಐಆರ್ ಈಶಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕಲ್ಲಿದ್ದಲು ಮತ್ತು ಇಂಧನ ಸಂಶೋಧನಾ ಸಮೂಹದ ಬಿನಯ್ ಕುಮಾರ್ ಸೈಕಿಯಾ.
* ಐಐಟಿ ಖರಗ್‌ಪುರ್‌ನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ದೇಬದೀಪ್ ಮುಖ್ಯೋಪಾಧ್ಯಾಯ್.
* ಮುಂಬೈ ಮೂಲದ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ಅನಿಶ್ ಘೋಷ್।
* ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆಯ ಸಾಕೇತ್ ಸೌರಭ್.
* ಐಐಟಿ ಬಾಂಬೆಯ ಅಚ್ಯುತ ಮೆನನ್ ಆರೋಗ್ಯ ವಿಜ್ಞಾನ ಅಧ್ಯಯನ ಸಂಸ್ಥೆಯ ಡಾ.ಜೀಮನ್ ಪನ್ನಿಯಮ್ಮಕಾಲ್.
* ಐಐಟಿ ಬಾಂಬೆಯ ಜೀವವಿಜ್ಞಾನ ಮತ್ತು ಜೀವ ಎಂಜಿನಿಯರಿಂಗ್ ವಿಭಾಗದ ರೋಹಿತ್ ಶ್ರೀವಾತ್ಸವ.