HEALTH TIPS

ನಾಳೆ ಪುದುಪಳ್ಳಿಯಲ್ಲಿ ಉಪಚುನಾವಣೆ: ಏಳು ಅಭ್ಯರ್ಥಿಗಳು; 1,76,417 ಮತದಾರರು: 957 ಮಂದಿ ಮೊದಲ ಬಾರಿಗೆ ಹಕ್ಕು ಚಲಾವಣೆ

                    ಕೊಟ್ಟಾಯಂ: ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ಪುದುಪಳ್ಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಾಳೆ(ಸೆ.5) ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.

              ಲಿಜಿನ್ ಲಾಲ್ (ಭಾರತೀಯ ಜನತಾ ಪಾರ್ಟಿ), ನ್ಯಾಯವಾದಿ. ಚಾಂಡಿ ಉಮ್ಮನ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಜೇಕ್ ಸಿ. ಥಾಮಸ್ (ಭಾರತೀಯ ಕಮ್ಯುನಿಸ್ಟ್ ಪಕ್ಷ-ಮಾಕ್ರ್ಸ್ ವಾದಿ), ಲೂಕ್ ಥಾಮಸ್ (ಆಮ್ ಆದ್ಮಿ ಪಕ್ಷ), ಸ್ವತಂತ್ರ ಅಭ್ಯರ್ಥಿಗಳಾದ ಪಿ.ಕೆ.ದೇವದಾಸ್ ಮತ್ತು ಶಾಜಿ ಸಂತೋಷ್ ಪುಲಿಕಲ್ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ 90,281 ಮಹಿಳೆಯರು, 86,132 ಪುರುಷರು ಹಾಗೂ ನಾಲ್ವರುತ್ರಿತೀಯ ಲಿಂಗಿಗಳು ಸೇರಿದಂತೆ ಒಟ್ಟು 1,76,417 ಮತದಾರರಿದ್ದಾರೆ. ಈ ಪೈಕಿ 957 ಮಂದಿ ಹೊಸದಾಗಿ ಮತ ಚಲಾಯಿಸಲಿದ್ದಾರೆ. ಇಂದು ಬೆಳಗ್ಗೆ 7 ರಿಂದ  ಕೊಟ್ಟಾಯಂನ ಬಸೇಲಿಯೋಸ್ ಕಾಲೇಜಿನಲ್ಲಿ ಮತದಾನ ಸಾಮಗ್ರಿಗಳ ವಿತರಣೆ ಆರಂಭವಾಗಿದೆ.

             ಮತಗಟ್ಟೆಗಳಿಗೆ ಅಧಿಕಾರಿಗಳನ್ನು ಕರೆದೊಯ್ಯಲು 54 ವಾಹನಗಳನ್ನು ಸಿದ್ಧಪಡಿಸಲಾಗಿದೆ. 228 ಮತ ಯಂತ್ರಗಳನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ 19 ವಿವಿ ಪ್ಯಾಟ್‍ಗಳನ್ನು ಸಿದ್ಧಪಡಿಸಲಾಗಿದೆ. ಶುಕ್ರವಾರ ಮತ ಎಣಿಕೆ ನಿಗದಿಯಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries