HEALTH TIPS

ನೀರ್ಚಾಲಿನಲ್ಲಿ 19ನೇ ವರ್ಷದ ಗಣೇಶೋತ್ಸವ ಸಂಪನ್ನ

          ಬದಿಯಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೀರ್ಚಾಲು ಇವರ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ನೀರ್ಚಾಲು ಮಹಾಜನ ಸಂಸ್ಕøತ ಶಾಲಾ ವಠಾರದಲ್ಲಿ ಜರಗಿತು. 

           ಬೆಳಗ್ಗೆ ದೀಪಪ್ರತಿಷ್ಠೆ, ವೇದಮೂರ್ತಿ ಕಿಳಿಂಗಾರು ಶಿವಶಂಕರ ಭಟ್ ಪಾಂಡೇಲು ಬೇಳ ಇವರ ಪೌರೋಹಿತ್ಯದಲ್ಲಿ ಗಣಪತಿ ಹವನ, ನಾಗತಂಬಿಲ ನಡೆಯಿತು. ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಭಜನಾ ಸಂಘದವರಿಂದ ಭಜನೆ, ನೀರ್ಚಾಲು ಶ್ರೀಧರ್ಮಶಾಸ್ತಾ ಕುಣಿತ ಭಜನಾ ಸಂಘದವರಿಂದ ಕುಣಿತ ಭಜನೆ ನಡೆಯಿತು. ಮಧ್ಯಾಹ್ನ ಶ್ರೀ ಸತ್ಯವಿನಾಯಕ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆಯ ನಂತರ ನೂರಾರು ಮಂದಿ ಭಕ್ತಾದಿಗಳು ಪ್ರಸಾದ ಭೋಜನ ಸ್ವೀಕರಿಸಿದರು. ಅಪರಾಹ್ನ ಪುಟಾಣಿ ಮಕ್ಕಳಿಂದ ನೃತ್ಯ ವೈವಿಧ್ಯ, ಧಾರ್ಮಿಕ ಸಭೆ ಜರಗಿತು. ಸಂಜೆ ಮದ್ವಾದೀಶ ವಿಠಲ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸ-ದೇಶ ಭಕ್ತಿಭಾವಸಂಗಮ ಮನಸೂರೆಗೊಂಡಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries