HEALTH TIPS

ಚೀನಾ ಭೂಪಟ: ಜಿ-20 ಶೃಂಗದಲ್ಲಿ ಪ್ರಸ್ತಾಪಕ್ಕೆ ಕಾಂಗ್ರೆಸ್‌ ಶಾಸಕ ಒತ್ತಾಯ

                          ಟಾನಗರ(PTI): ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್‌ ಚಿನ್‌ ಪ್ರದೇಶವನ್ನು ತನ್ನ ಭೂಭಾಗವೆಂದು ತೋರಿಸುವ ಭೂಪಟ ಬಿಡುಗಡೆ ಮಾಡಿದ ಚೀನಾ ನಡೆಯನ್ನು ಜಿ-20 ಶೃಂಗಸಭೆ ವೇಳೆ ಪ್ರಸ್ತಾಪಿಸುವಂತೆ ಹಿರಿಯ ಕಾಂಗ್ರೆಸ್‌ ಶಾಸಕ ನಿನಾಂಗ್ ಎರಿಂಗ್ ಒತ್ತಾಯಿಸಿದ್ದಾರೆ.

                  ಈ ಕುರಿತು ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗೆ ಮಾತುಕತೆ ನಡೆಸುವಂತೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

                     'ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂಬುದಾಗಿ ಈ ಹಿಂದೆಯೂ ಚೀನಾ ಹೇಳಿಕೊಂಡಿತ್ತು. ರಾಜ್ಯದ 11 ಸ್ಥಳಗಳ ಹೆಸರುಗಳನ್ನು ಬದಲಿಸುವ ಮೂಲಕ ತನ್ನ ಹಕ್ಕುಸ್ಥಾಪಿಸಲು ಯತ್ನಿಸಿತ್ತು. ಚೀನಾದ ಈ ನಡೆ ಉದ್ದೇಶಪೂರ್ವಕ ಹಾಗೂ ದುರದೃಷ್ಟಕರ. ಈ ಬಗ್ಗೆ ಅರುಣಾಚಲ ಪ್ರದೇಶದ ಜನತೆಯಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ' ಎಂದು ಎರಿಂಗ್‌ ಹೇಳಿದ್ದಾರೆ. ಅವರು ಪಶ್ಚಿಮ ಪಾಸೀಘಾಟ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries