ಉಪ್ಪಳ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಪೈವಳಿಕೆ ಶಾಖೆಯ 19 ನೇ ಮಹಾಸಭೆ ಹಾಗೂ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಸೆ. 3 ರಂದು ಭಾನುವಾರ ಪೈವಳಿಕೆ ಕಾಯರ್ಕಟ್ಟೆಯಲ್ಲಿರುವ ಕುಲಾಲ ಸಮಾಜ ಮಂದಿರದಲ್ಲಿ ಜರಗಲಿದೆ. ಬೆಳಗ್ಗೆ 9 ಕ್ಕೆ ಶ್ರೀಸತ್ಯನಾರಾಯಣ ಪೂಜಾರಂಭ, 10.30ಕ್ಕೆ ಮಹಾ ಮಂಗಳರಾತಿ, ಪ್ರಸಾದ ವಿತರಣೆ ನಂತರ ಮಹಾಸಭೆ, ಅನ್ನ ಸಂತರ್ಪಣೆ, ಪ್ರತಿಭಾ ಕಾರಂಜಿ, ಯಕ್ಷಗಾನ ಬಯಲಾಟ ಗುರು ದಕ್ಷಿಣೆ ನಡೆಯಲಿದೆ. ಸಭಾಧ್ಯಕ್ಷತೆ ಯನ್ನು ಕುಲಾಲ ಸಂಘ ಪೈವಳಿಕೆ ಶಾಖೆ ಅಧ್ಯಕ್ಷ ಬಾಬು ಮೂಲ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕುಲಾಲ ಸಂಘ ಬೆಂಗಳೂರು ಅಧ್ಯಕ್ಷ ವಿಠಲ ಕಣ್ಣೀರುತೋಟ, ಕರ್ನಾಟಕ ಸರ್ಕಾರದ ನಿವೃತ್ತ ಅಧಿಕಾರಿ ಆನಂದ ಪೆರ್ಮುದೆ, ಉದ್ಯಮಿ ಉಮೇಶ್ ಇಡಿಯಾಳ, ಕೊಲ್ಯ ಕುಲಾಲ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸುಲೋಚನಾ ಟೀಚರ್ ಬಜಾಲ್, ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ, ಸಹಕಾರ ಬ್ಯಾಂಕ್ ನಿವೃತ್ತ ಉದ್ಯೋಗಿ ಮುಂಡಪ್ಪ ಮೂಲ್ಯ ಕೊಮ್ಮಂಗಳ ಭಾಗವಹಿಸುವರು. ಲೀಲಾವತಿ ಪೆರ್ಮುದೆ, ಶೀನ ಮಾಸ್ತರ್ ಕೋರಿಕ್ಕಾರ್, ರಾಮ ಮೂಲ್ಯ ಅಂಗಡಿಮಾರು, ಚರಣ್ ಕುಮಾರ್ ಚಿಪ್ಪಾರು, ಸೀತಾರಾಮ ಕುಲಾಲ್ ಅಂಗಡಿಮಾರು, ದೇವು ಮೂಲ್ಯ ಕೊಮ್ಮಂಗಳ, ಪೂವಪ್ಪ ಸಾಲ್ಯಾನ್ ಮುನ್ನಿಪ್ಪಾಡಿ, ಐತಪ್ಪ ಮಾಸ್ತರ್ ಬಂಗಲೆ, ನಾಗೇಶ್ ಕೋಡಂದೂರು, ನಾರಾಯಣ ಗೋಳಿಮೂಲೆ, ಶ್ರೀಧರ್ ಬದಿಯಾರ್ ಗೌರವ ಉಪಸ್ಥಿತರಿರುವರು. ಸಾಧಕರಾದ ಎ.ಟಿ.ಯಸ್. ಕುಲಾಲ್, ಡಾ. ಹರೀಶ್ ಬೊಟ್ಟಾರಿ, ಡಾ. ಯೋಗೀಶ್ ಮಂಡೆಕಾಪು, ಚಂದಪ್ಪ ಮೂಲ್ಯ ಕಾಯರ್ಕಟ್ಟೆ, ಪ್ರಜ್ಞಾ ಬದಿಯಾರು ಇವರುಗಳಿಗೆ ಗೌರವಾರ್ಪಣೆ ನಡೆಯಲಿದೆ. ಪೈವಳಿಕೆ ಪಂಚಾಯತಿ ವ್ಯಾಪ್ತಿಯ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ 2022-23ನೇ ವಿದ್ಯಾಬ್ಯಾಸ ವರ್ಷದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಎಸ್. ಎಸ್. ಎ ಲ್. ಸಿ ಮತ್ತು ಪಿಯುಸಿ, ಪ್ಲಸ್ ಟು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸ ಬೇಕೆಂದು ಕುಲಾಲ ಶಾಖೆ ಪ್ರಕಟಣೆಯಲ್ಲಿ ವಿನಂತಿಸಿದೆ.





