HEALTH TIPS

ದೈಗೋಳಿ 42 ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ 19 ರಂದು

          ಮಂಜೇಶ್ವರ: ದೈಗೋಳಿ ಜ್ಞಾನೋದಯ ಸಮಾಜ ಆಶ್ರಯದಲ್ಲಿ 42 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು 19 ರಂದು ಒಡಿಯೂರಿನ ಪೂಜ್ಯ ಶ್ರೀಗುರು ದೇವಾನಂದ ಸ್ವಾಮೀಜಿ ರವರ ಶುಭಾಶೀರ್ವಾದದೊಂದಿಗೆ ವೇ. ಮೂ. ಕುರಿಯ ರಾಮ ಮೂರ್ತಿಯವರ ಪೌರೋಹಿತ್ಯದಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಶ್ರೀ ಗಣೇಶ ಮಂದಿರದಲ್ಲಿ ಬೆಳಗ್ಗೆ 8.30ಕ್ಕೆ ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಮಹಾಗಣಪತಿ ಹೋಮ ಪ್ರಾರಂಭ, ಭಕ್ತಿ ಗೀತೆ ಮತ್ತು ಛದ್ಮವೇಷ ಸ್ವರ್ಧೆಗಳು ನಡೆಯಲಿದೆ.  ಭಗವದ್ಗೀತೆ ಪಾರಾಯಣ, ನಂತರ ಶ್ರೀ ರಾಮಕೃಷ್ಣ ಭಜನಾ ಮಂಡಳಿ ದೈಗೋಳಿ ತಂಡದಿಂದ ಭಜನೆ ಹಾಗೂ ಶ್ರೀ ಸತ್ಯ ನಾರಾಯಣ ಭಜನಾ ಮಂದಿರ ಕೋಳ್ಯೂರು ಪದವು ಇವರಿಂದ ಕುಣಿತ ಭಜನೆ ನಡೆಯಲಿದೆ. ಮದ್ಯಾಹ್ನ 12.30 ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಅಪರಾಹ್ನ 2 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ನಾಟ್ಯ ವೈಭವ ಜಗಲಿದೆ. ಸಂಜೆ 4 ಕ್ಕೆ ಸಭಾ ಕಾರ್ಯಕ್ರಮ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದ್ದು ಸಂಜೆ 5.30 ರಿಂದ ಶೋಭಾ ಯಾತ್ರೆ ಪ್ರಾರಂಭವಾಗಲಿದೆ. ಶ್ರೀ ಗಣೇಶ ವಿಸರ್ಜನಾ ಕಾರ್ಯಕ್ರಮ ಕಣಿಯೂರಿನ ಸಾರ್ವಜನಿಕ ಕೆರೆ ಯಲ್ಲಿ ನಡೆಯಲಿದ್ದು ನಂತರ ಶ್ರೀ ಗಣೇಶ ಭಕ್ತವೃಂದ ಕಣಿಯೂರು ಅವರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries