HEALTH TIPS

ರಾಜ್ಯದ ಇನ್ನೂ 5 ಆಸ್ಪತ್ರೆಗಳಿಗೆ ರಾಷ್ಟ್ರೀಯ ಗುಣಮಟ್ಟದ ಮಾನ್ಯತೆ; ಒಟ್ಟು 170 ಆರೋಗ್ಯ ಸಂಸ್ಥೆಗಳಿಗೆ ಎನ್‍ಕ್ಯೂಎಎಸ್ ರ್ಯಾಂಕ್

                     ತಿರುವನಂತಪುರಂ: ರಾಜ್ಯದ ಇನ್ನೂ 5 ಆಸ್ಪತ್ರೆಗಳಿಗೆ ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡ (ಎನ್‍ಕ್ಯೂಎಎಸ್) ಅನುಮೋದನೆ ನೀಡಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

                         4 ಆಸ್ಪತ್ರೆಗಳು ಹೊಸ ಎನ್‍ಕ್ಯೂಎಎಸ್ ಗಳಿಸಿಕೊಂಡಿದೆ. ಒಂದು ಆಸ್ಪತ್ರೆಗೆ ಮಾನ್ಯತೆ ಮತ್ತು ಮರು-ಮಾನ್ಯತೆ ನೀಡಲಾಗಿದೆ. ಕೊಲ್ಲಂ ಮಡತಾರ ಎಫ್.ಎಚ್.ಸಿ. 92% ಅಂಕ, ಎರ್ನಾಕುಳಂ ಕೊಡನಾಡ್ ಎಫ್.ಎಚ್.ಸಿ  86% ಅಂಕ, ಕೊಟ್ಟಾಯಂ ವೆಲ್ಲೂರ್É  ಎಫ್.ಎಚ್.ಸಿ. ಶೇ. 92% ಅಂಕ, ಪಾಲಕ್ಕಾಡ್ ಪೂಕೊಟುಕ್ಕಾವೊ ಎಫ್.ಎಚ್.ಸಿ ಮಾನ್ಯತೆ ಪಡೆದಿದೆ. ಹೊಸದಾಗಿ  93% ಅಂಕಗಳೊಂದಿಗೆ ಅನುಮೋದನೆ ಪಡೆದಿದೆ.  ಮಲಪ್ಪುರಂ ಕೊಟ್ಟಾಯಕಲ್ ಎಫ್.ಹೆಚ್.ಸಿ. 99ರಷ್ಟು ಅಂಕ ಗಳಿಸುವ ಮೂಲಕ ಮರು ಮಾನ್ಯತೆ ಪಡೆದಿರುವುದಾಗಿ ಸಚಿವರು ತಿಳಿಸಿದ್ದಾರೆ.

                     ಇದರೊಂದಿಗೆ ರಾಜ್ಯದ 170 ಆಸ್ಪತ್ರೆಗಳು ಹೊಸದಾಗಿ ಎನ್‍ಕ್ಯೂಎಎಸ್ ಆಗಿವೆ. ಮಾನ್ಯತೆ ಮತ್ತು 67 ಆಸ್ಪತ್ರೆಗಳು ಮರು-ಮಾನ್ಯತೆ ಸಾಧಿಸಿವೆ. 5 ಜಿಲ್ಲಾ ಆಸ್ಪತ್ರೆಗಳು, 4 ತಾಲೂಕು ಆಸ್ಪತ್ರೆಗಳು, 9 ಸಮುದಾಯ ಆರೋಗ್ಯ ಕೇಂದ್ರಗಳು, 39 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 113 ಕುಟುಂಬ ಆರೋಗ್ಯ ಕೇಂದ್ರಗಳು ಎನ್‍ಕ್ಯೂಎಎಸ್ ಮಾನ್ಯತೆ ಪಡೆದಿವೆ.

              ಆಸ್ಪತ್ರೆಯನ್ನು ರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಲು 8 ವಿಭಾಗಗಳಲ್ಲಿ ಸುಮಾರು 6,500 ಚೆಕ್ ಪಾಯಿಂಟ್‍ಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಎನ್.ಕ್ಯೂ.ಎ.ಎಸ್. ಅನುಮೋದನೆಯು 3 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. 3 ವರ್ಷಗಳ ನಂತರ ರಾಷ್ಟ್ರೀಯ ಮಟ್ಟದ ತಂಡದ ಮರು ಪರೀಕ್ಷೆ ನqಸಲಿದೆ. ಅಲ್ಲದೆ ಪ್ರತಿ ವರ್ಷ ರಾಜ್ಯ ಮಟ್ಟದ ಪರೀಕ್ಷೆ ಇರುತ್ತದೆ. ಎನ್.ಕ್ಯೂ.ಎ.ಎಸ್. ಅನುಮೋದಿತ ಪಿಎಚ್‍ಸಿಗಳು ತಲಾ 2 ಲಕ್ಷ ರೂ ಮತ್ತು ಇತರ ಆಸ್ಪತ್ರೆಗಳು ಪ್ರತಿ ಹಾಸಿಗೆಗೆ ವಾರ್ಷಿಕ 10 ಸಾವಿರ ರೂ.ನೆರವು ಪಡೆಯಲಿವೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries