ನವದೆಹಲಿ: 'ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಜಾತಿ ಗಣತಿ ನಡೆಸುವಂತೆ ಸರ್ಕಾರಕ್ಕೆ ಸೂಚಿಸಲಿ' ಎಂದು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಸಂಸದ ಮನೋಜ್ ಝಾ ಗುರುವಾರ ಹೇಳಿದ್ದಾರೆ.
ನವದೆಹಲಿ: 'ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಜಾತಿ ಗಣತಿ ನಡೆಸುವಂತೆ ಸರ್ಕಾರಕ್ಕೆ ಸೂಚಿಸಲಿ' ಎಂದು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಸಂಸದ ಮನೋಜ್ ಝಾ ಗುರುವಾರ ಹೇಳಿದ್ದಾರೆ.
ಮೀಸಲಾತಿಗೆ ಬೆಂಬಲ ಸೂಚಿಸಿ ಭಾಗವತ್ ಅವರು ನೀಡಿದ್ದ ಹೇಳಿಕೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
'ಗೋಳವಲಕರ್ ಅವರ ಅನುಯಾಯಿಯಾಗಿರುವ ಭಾಗವತ್ ಅವರು ಸಂವಿಧಾನದ ಬಗ್ಗೆ ಆಲೋಚಿಸಲು ಆರಂಭಿಸಿರುವುದು ಸಂತಸ ತಂದಿದೆ' ಎಂದು ಝಾ ತಿಳಿಸಿದ್ದಾರೆ.
'ಅವರು ತಮ್ಮ ಸಂಘಟನೆಯನ್ನು ಸಾಮಾಜಿಕ ಸಂಘಟನೆ ಎನ್ನುತ್ತಾರೆ. ಆದರೆ ಅದು ರಾಜಕೀಯ ಸಂಘಟನೆ. ಅದು ಸರ್ಕಾರವನ್ನು ನಡೆಸುತ್ತದೆ. ಜಾತಿ ಗಣತಿ ಬಗ್ಗೆ ಅವರು ಏಕೆ ಮೌನವಾಗಿದ್ದಾರೆ' ಎಂದೂ ಪ್ರಶ್ನಿಸಿದ್ದಾರೆ.
'ಸಮಾಜದಲ್ಲಿ ಎಲ್ಲಿಯವರೆಗೆ ಅಸಮಾನತೆ ಇರುತ್ತದೊ ಅಲ್ಲಿಯವರೆಗೆ ಮೀಸಲಾತಿ ಮುಂದುವರಿಸಬೇಕು. ಸಂವಿಧಾನದಲ್ಲಿ ಒದಗಿಸಲಾದ ಮೀಸಲಾತಿಗೆ ಆರ್‌ಎಸ್‌ಎಸ್ ಬೆಂಬಲ ನೀಡುತ್ತದೆ' ಎಂದು ಭಾಗವತ್ ಅವರು ನಾಗ್ಪುರದಲ್ಲಿ ಬುಧವಾರ ಹೇಳಿದ್ದರು.