ಪತ್ತನಂತಿಟ್ಟ: ಶಬರಿಮಲೆಗೆ ಭೇಟಿ ನೀಡುತ್ತಿರುವುದಾಗಿ ಆಂಗ್ಲಿಕನ್ ಚರ್ಚ್ ನ ಪಾದ್ರಿ ಫಾದರ್ ಮನೋಜ್ ನಿನ್ನೆ ಘೋಷಿಸಿದ್ದರು.
ಧಮಗುರುವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ಸಿಕ್ಕಿತು. ಈ ನಡುವೆ ಆಂಗ್ಲಿಕನ್ ಚರ್ಚ್ ನ ಪಾದ್ರಿ ಫಾದರ್ ಮನೋಜ್ ಧರ್ಮ ಸಂಸ್ಕಾರ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚರ್ಚ್ ಕ್ರಮ ಕೈಗೊಂಡಿದೆ.
ಸುದ್ದಿ ಚರ್ಚೆಯಾದ ನಂತರ, ಚರ್ಚ್ ಈಗ ಪಾದ್ರಿ ಮನೋಜ್ ಅವರ ಪರವಾನಗಿ ಮತ್ತು ಗುರುತಿನ ಚೀಟಿಯನ್ನು ಹಿಂಪಡೆದಿದೆ. ಆದರೆ ಪಾದ್ರಿ ತಾನು ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಳೆಯ ಒಡಂಬಡಿಕೆಯ ನಿಬಂಧನೆಗಳ ಆಧಾರದ ಮೇಲೆ ಧರ್ಮ ವಿರುದ್ಧ ವರ್ತನೆಯಾಗಿದೆ. ಪ್ರಸ್ತುತ ಕ್ರಿಶ್ಚಿಯನ್ ನಂಬಿಕೆಗೆ ವಿರೋಧವಾಗಿರುವುದರಿಂದ ಚರ್ಚ್ ನ ಕ್ರಮವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪಾದ್ರಿ ಸೂಚಿಸಿದರು.
ಬಲರಾಮಪುರಂ ಉಚ್ಚಕ್ಕಡ ಪಯಟುವಿಲಾ ತಿರುವನಂತಪುರಂ ಮೂಲದವರಾದ ಫಾ. ಮನೋಜ್. ತಿರುಮಲ ಮಹಾದೇವಕ್ಷೇತ್ರದಿಂದ ದೀಕ್ಷೆ ಪಡೆದಿದ್ದಾರೆ. ಧಾರ್ಮಿಕ ವಿಧಿಗಳನ್ನು ನಿಖರವಾಗಿ ಅನುಸರಿಸಿದ ನಂತರ ನಲವತ್ತೊಂದು ದಿನಗಳ ಕಠಿಣ ಉಪವಾಸವು ಪ್ರಾರಂಭಿಸಿದರು. ಇದೇ ತಿಂಗಳ 20ರಂದು ಶಬರೀಶÀನನ್ನು ಭೇಟಿಯಾಗಲು ತೆರಳುತ್ತಿರುವುದಾಗಿ ತಿಳಿಸಿದ್ದಾರೆ.
ಇತರರು ಏನು ಹೇಳುತ್ತಾರೆಂದು ತಾನು ಕಾಳಜಿ ವಹಿಸುವುದಿಲ್ಲ ಮತ್ತು ಅಯ್ಯಪ್ಪ ದರ್ಶನ ಆಧ್ಯಾತ್ಮಿಕ ಮತ್ತು ವೃತ್ತಿಪರ ಜೀವನಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂಬ ನಂಬಿಕೆ ತನ್ನದೆಂದು ಅವರು ಹೇಳುತ್ತಾರೆ.
ಧರ್ಮದಿಂದ ದೇವರಿಗೆ ಬೇಲಿ ಹಾಕಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಇದನ್ನು ಅರಿತುಕೊಂಡರೆ ಜಗತ್ತಿನ ಬಹುದೊಡ್ಡ ಒಂದು ಸಮಸ್ಯೆ ನಿವಾರಣೆಯಾಗಬಲ್ಲದು. ಎಲ್ಲಾ ಧರ್ಮಗಳು ಮಾನವ ಕಲ್ಯಾಣವನ್ನು ಗುರಿಯಾಗಿಸಿಕೊಂಡಿವೆ ಎಂದು ಅವರು ಹೇಳುತ್ತಾರೆ.