HEALTH TIPS

ಶರೋನ್ ಕೊಲೆ ಪ್ರಕರಣ; ಸಹ ಕೈದಿಗಳ ದೂರಿನ ಮೇರೆಗೆ ಗ್ರೀಷ್ಮಾ ಬೇರೆ ಜೈಲಿಗೆ ವರ್ಗಾವಣೆ

                 ತಿರುವನಂತಪುರಂ: ರಾಜ್ಯಾದ್ಯಂತ ಆಘಾತಗೊಳಿಸಿದ ಪಾರಶಾಲಾ ಶರೋನ್ ಹತ್ಯೆ ಪ್ರಕರಣದ ಆರೋಪಿ ಗ್ರೀಷ್ಮಾಳನ್ನು ಬೇರೆ ಜೈಲಿಗೆ ವರ್ಗಾಯಿಸಲಾಗಿದೆ. ಅಟ್ಟಕುಳಂಗರ ಮಹಿಳಾ ಜೈಲಿನಲ್ಲಿದ್ದ ಆರೋಪಿಯನ್ನು ಮಾವೇಲಿಕರ ವಿಶೇಷ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

           ಸಹ ಕೈದಿಗಳ ದೂರಿನ ಮೇರೆಗೆ ಗ್ರೀಷ್ಮಾ ಸೇರಿದಂತೆ ಇಬ್ಬರು ಕೈದಿಗಳನ್ನು ಅಟ್ಟಕುಳಂಗರ ಜೈಲಿನಿಂದ ವರ್ಗಾಯಿಸಲಾಗಿದೆ. ಆರೋಪಿ ಗ್ರೀಷ್ಮಾ ಈ ಪ್ರಕರಣದಲ್ಲಿ ಬಂಧಿತಳಾದ ನಂತರ ಈ ಜೈಲಿನಲ್ಲಿದ್ದಳು. 

          ಗ್ರೀಷ್ಮಾ ಕಳೆದ ವರ್ಷ ಅಕ್ಟೋಬರ್ 14 ರಂದು ತಮಿಳುನಾಡಿನ ಪಲುಕ್‍ನಲ್ಲಿರುವ ತನ್ನ ಪ್ರಿಯಕರನಾಗಿದ್ದ ಶರೋನ್ ಎಂಬ ಯುವಕನಿಗೆ ವಿಷ ಉಣಿಸಿದ್ದಳು.  ದೈಹಿಕ ಅಸ್ವಸ್ಥತೆಯನ್ನು ಎದುರಿಸಿದ ನಂತರ, ಶರೋನ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಹಲವಾರು ದಿನಗಳ ಪ್ರತಿರೋಧದ ನಂತರ, ಶರೋನ್ ಅಂತಿಮವಾಗಿ ಅಕ್ಟೋಬರ್ 25 ರಂದು ಮೃತನಾದ. ಶರೋನ್ ನ ಅಪಮೃತ್ಯುವಿನಲ್ಲಿ ಮೊದಲು ಗ್ರೀಷ್ಮಾಳನ್ನು ಅನುಮಾನಿಸಲು ಏನೂ ಇದ್ದಿರಲಿಲ್ಲ.

            ಪ್ರಾಥಮಿಕ ಹಂತದಲ್ಲಿ ಪಾರಶಾಲ ಪೋಲೀಸರು ಇದೊಂದು ಸಹಜ ಸಾವು ಎಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ ನಂತರದ ತನಿಖೆಯಲ್ಲಿ ಗ್ರೀಷ್ಮಾ ಪಾತ್ರ ಸ್ಪಷ್ಟವಾಯಿತು.  ಆರೋಪಿಯ ತಾಯಿ ಸಿಂಧು ಮತ್ತು ಚಿಕ್ಕಪ್ಪ ನಿರ್ಮಲಾ ಕುಮಾರನ್ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಬೇರೊಬ್ಬರನ್ನು ಮದುವೆಯಾಗಲು ಗ್ರೀಷ್ಮಾ ಈ ಕೃತ್ಯ ಎಸಗಿದ್ದಳು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries