ನವದೆಹಲಿ: 'ಭಾರತ್ ಜೋಡೊ ಯಾತ್ರೆ'ಯನ್ನು ಜನಾಂದೋಲನವೆಂದು ಬಣ್ಣಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅದೊಂದು ಭೌತಿಕ ಸಾಹಸ ಮಾತ್ರವಲ್ಲದೇ, ಒಡೆದ ಆತ್ಮಸಾಕ್ಷಿಯನ್ನು ಒಟ್ಟುಗೂಡಿಸುವ ಪ್ರಾಮಾಣಿಕ ಪ್ರಯತ್ನವಾಗಿತ್ತು ಎಂದಿದ್ದಾರೆ.
0
samarasasudhi
ಸೆಪ್ಟೆಂಬರ್ 08, 2023
ನವದೆಹಲಿ: 'ಭಾರತ್ ಜೋಡೊ ಯಾತ್ರೆ'ಯನ್ನು ಜನಾಂದೋಲನವೆಂದು ಬಣ್ಣಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅದೊಂದು ಭೌತಿಕ ಸಾಹಸ ಮಾತ್ರವಲ್ಲದೇ, ಒಡೆದ ಆತ್ಮಸಾಕ್ಷಿಯನ್ನು ಒಟ್ಟುಗೂಡಿಸುವ ಪ್ರಾಮಾಣಿಕ ಪ್ರಯತ್ನವಾಗಿತ್ತು ಎಂದಿದ್ದಾರೆ.
'ನ್ಯಾಯ, ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವದ ನಮ್ಮ ಮೂಲ ಮೌಲ್ಯಗಳು ನಮಗೆ ಪ್ರಧಾನವಾದದ್ದು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಯ ಪ್ರಯತ್ನದಲ್ಲಿ ಕಾಂಗ್ರೆಸ್ ಪಕ್ಷವು ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತದೆ' ಎಂದು ಅವರು ಹೇಳಿದ್ದಾರೆ.
'ದ್ವೇಷ ಮತ್ತು ವಿಭಜನೆಯ ಕಾರ್ಯಸೂಚಿಯನ್ನು ಮರೆಮಾಚುವ ಸಲುವಾಗಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರವೃತ್ತಿಯು ನಮ್ಮ ಸಾಕ್ಷಿಪ್ರಜ್ಞೆ ಮೇಲಿನ ವ್ಯವಸ್ಥಿತ ದಾಳಿಯಾಗಿದೆ'ಎಂದು ಖರ್ಗೆ ಹೇಳಿದರು.
'ದೇಶದಲ್ಲಿನ ಆರ್ಥಿಕ ಅಸಮಾನತೆ, ಬೆಲೆ ಏರಿಕೆ, ನಿರುದ್ಯೋಗ, ಸಾಮಾಜಿಕ ಅನ್ಯಾಯ, ಸಂವಿಧಾನದ ಮೇಲಿನ ದಾಳಿ, ಅಧಿಕಾರದ ಕೇಂದ್ರೀಕರಣದಂಥ ನಿಜವಾದ ಸಮಸ್ಯೆಗಳನ್ನು ಜನರ ಮುಂದಿಡುವ ಪ್ರಯತ್ನವೇ 'ಭಾರತ ಜೋಡೊ' ಆಗಿತ್ತು' ಎಂದು ಖರ್ಗೆ ತಿಳಿಸಿದ್ದಾರೆ.
2022ರ ಸೆಪ್ಟೆಂಬರ್ 07ರಂದು ಭಾರತ ಜೋಡೊ ಯಾತ್ರೆ ಆರಂಭವಾಗಿತ್ತು.