HEALTH TIPS

ಸಂಗೀತಕ್ಕೆ ನಿರಂತರ ಸಾಧನೆಯೇ ಶಕ್ತಿ - ರೇವತಿ ಕಾಮತ್

            ಬದಿಯಡ್ಕ : 'ಮುಂದಿನ ದಿನಗಳಲ್ಲಿ ವೀಣಾವಾದಿನಿ ಸಂಗೀತ ಸಂಸ್ಥೆಯು ಪ್ರತಿಷ್ಠಿತ ಸಂಗೀತ ಅಕಾಡೆಮಿ ಆಗಬೇಕು. ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಈ ಸಂಸ್ಥೆ ಬೆಳೆಯಬೇಕು. ಶಾಸ್ತ್ರೀಯ ಸಂಗೀತದ ಹಿನ್ನಲೆ ಇದ್ದರೆ ಸಿನಿಮಾ ಹಾಡುಗಳನ್ನು ಶುದ್ಧÀವಾಗಿ ಹಾಡಬಹುದು. ಸಂಗೀತ ಕಲೆಯು ಅಪೂರ್ವವಾದ ಗಂಧರ್ವವಿದ್ಯೆ. ವಿದ್ಯಾರ್ಥಿಯು ನಿರಂತರ ಸಾಧನೆಯ ಮೂಲಕ ಮಾತ್ರ ಸಂಗೀತವನ್ನು ಸಿದ್ಧಿಸಿಕೊಳ್ಳಬಹುದು ಎಂದು ಖ್ಯಾತ ವೀಣಾವಾದಕಿ ರೇವತಿ ಕಾಮತ್ ಹೇಳಿದರು.


            ಅವರು ಶನಿವಾರ ಸಂಜೆ ವೀಣಾವಾದಿನಿ ಸಂಗೀತ ವಿದ್ಯಾಪೀಠಂನ ನೇತೃತ್ವದಲ್ಲಿ ಬದಿಯಡ್ಕ ಸಮೀಪದ ಪುಳಿತ್ತಡಿಯ ಬಳ್ಳಪದವು ನಾರಾಯಣೀಯಂ ಸಂಗೀತ ಶಾಲೆಯಲ್ಲಿ ನಡೆದ ವೀಣಾವಾದಿನಿ ಸತ್‍ಸಂಗೀತಂ ಕಾರ್ಯಕ್ರಮದಲ್ಲಿ ಮಾತನಾಡಿದರು.

          ಕಾರ್ಯಕ್ರಮದಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗಣೇಶ್ ಕಿನ್ನಿಗೋಳಿ ಉಪಸ್ಥಿತರಿದ್ದರು. ಬಳ್ಳಪದವು ಯೋಗೀಶ ಶರ್ಮ ವಂದಿಸಿದರು. ನಂತರ ರೇವತಿ ಕಾಮತ್ ಮತ್ತು ಬಳಗದವರಿಂದ ವೀಣಾವಾದನ £ಡೆಯಿತು. ಹಿಮ್ಮೇಳದಲ್ಲಿ ಮೃದಂಗದಲ್ಲಿ ವಿದ್ವಾನ್ ಎಸ್ ವಿ ಗಿರಿಧರ್ ಬೆಂಗಳೂರು, ಘಟಂನಲ್ಲಿ ರಂಜಿತ್ ರಾಮ್ ಕಾಂಞಂಗಾಡು ಸಹಕರಿಸಿದ್ದರು. ಕಾರ್ಯಕ್ರಮದಲ್ಲಿ ವೀಣಾವಾದಿನಿ ಸಂಗೀತ ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು. ಹಿತೈಷಿಗಳು ಭಾಗವಹಿಸಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries