ಮುಳ್ಳೇರಿಯ: ಹಿರಿಯ ಕಾರ್ಯಕ್ರಮ ನಿರೂಪಕ, ಸಂಘಟಕರಾದ ಅಡೂರಿನ ಡಾ. ಕೆ ಎನ್ ಅಡಿಗರಿಗೆ ಬೆಂಗಳೂರಿನ ಗಾನಧಾರೆ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಈ ವರ್ಷದ ಗಾನ ಸಾರ್ವಭೌಮ ಡಾ. ಪಿ ಬಿ ಶ್ರೀನಿವಾಸ್ ಯಶೋನಿಧಿ ಪ್ರಶಸ್ತಿಯನ್ನು ಶುಕ್ರವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿತರಿಸಲಾಯಿತು.
ಕೆ ಎನ್ ಅಡಿಗ ಅವರ ಸಂಘಟನೆ ಹಾಗೂ ನಿರೂಪಣೆಯ ಕ್ಷೇತ್ರದ ಅನುಪಮ ಸೇವೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ನಟ ಪ್ರಣಯರಾಜ ಡಾ.ಶ್ರೀನಾಥ್, ಚಲನಚಿತ್ರ ನಿರ್ದೇಶಕ ಎಚ್ ಆರ್ ಭಾರ್ಗವ, ಲಯನ್ ಡಿ ಪಿಲಿಪ್ಸ್‍ರಾಜ್, ಎಂ ವೆಂಕಟೇಶ್ ಶೇಷಾದ್ರಿ, ಗಾನಧಾರೆ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ಪಿ ಬಿ ಶ್ರೀನಿವಾಸ್ ಅವರಿಗೆ ಗೀತ ನಮನ ಸಲ್ಲಿಸಲಾಯಿತು.

.jpg)
